1947 ರಿಂದಲೂ ಕಾಶ್ಮಿರಕ್ಕಾಗಿ ಪಾಕ್ ರೋಧಿಸುತ್ತಿದೆ: ಎನ್‌ಪಿಪಿ ಲೇವಡಿ

ಶನಿವಾರ, 23 ಜುಲೈ 2016 (16:23 IST)
ಜಮ್ಮು ಕಾಶ್ಮಿರ ಪಾಕಿಸ್ತಾದ ಒಂದು ಭಾಗವಾಗುವುದನ್ನು ನೋಡಲು ಕಾಯುತ್ತಿದ್ದೇನೆ ಎಂದು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್  ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ನ್ಯಾ|ನಲ್ ಫ್ಯಾಂಥರ್ಸ್ ಪಾರ್ಟಿ, ಭಾರತ ಸ್ವಾತಂತ್ರ್ಯವಾದಾಗಿನಿಂದ ಪಾಕಿಸ್ತಾನ ಕನಸು ಕಾಣುತ್ತಿದೆ ಎಂದು ಲೇವಡಿ ಮಾಡಿದೆ. 
 
1947ರ ಆಗಸ್ಟ್ 14 ರಂದು ಪಾಕಿಸ್ತಾನ ಸ್ವಾತಂತ್ರ್ಯವಾದಾಗಿನಿಂದ ಕಾಶ್ಮಿರ ದೇಶದ ಭಾಗವಾಗಬೇಕು ಎಂದು ರೋಧಿಸುತ್ತಿದೆ. ಜಮ್ಮು ಕಾಶ್ಮಿರದ ಜನತೆ ಭಾರತದೊಂದಿಗೆ ವಿವಾಹವಾಗಿದ್ದಾರೆ. ನಾವು ಜಾತ್ಯಾತೀತ ಭಾರತಕ್ಕೆ ಬದ್ಧರಾಗಿದ್ದೇವೆ. ಪಾಕಿಸ್ತಾನದ ಹೇಳಿಕೆಯಿಂದ ಆಶ್ಚರ್ಯವಾಗಿಲ್ಲ ಎಂದು ನ್ಯಾಷನಲ್ ಪ್ಯಾಂಥರ್ಸ್ ಪಕ್ಷದ ಮುಖಂಡ ಭೀಮ್ ಸಿಂಗ್ ಹೇಳಿದ್ದಾರೆ.
 
ಜಮ್ಮು ಕಾಶ್ಮಿರದ ಜನತೆ ಅಭಿವೃದ್ಧಿಗಾಗಿ, ಪ್ರಜಾಪ್ರಭುತ್ವಕ್ಕಾಗಿ ಹೋರಾಟ ನಡೆಸುತ್ತಾರೆ. ಆದರೆ, ಪಾಕಿಸ್ತಾನದಂತಹ ಪ್ರಜಾಪ್ರಭುತ್ವ ವಿರೋಧಿ ದೇಶದೊಂದಿಗೆ ಒಂದಾಗಲು ಬಯಸುವುದಿಲ್ಲ ಎಂದು ತಿಳಿಸಿದ್ದಾರೆ.
 
ಭಾರತದಲ್ಲಿ ಉತ್ತಮ ಪ್ರಜಾಪ್ರಭುತ್ವವಿದೆ ಎನ್ನುವುದನ್ನು ಒಂದಿಲ್ಲಾ ಒಂದು ದಿನವಾದರೂ ಪಾಕ್ ಪ್ರಧಾನಿ ಷ|ರೀಫ್ ಅವರಿಗೆ ಮನವರಿಕೆಯಾಗುತ್ತದೆ. ಷರೀಫ್‌ಗೆ ಮನವರಿಕೆಯಾಗಿದೆ. ಆದರೆ, ಬಹಿರಂಗವಾಗಿ ಹೇಳುವ ತಾಕತ್ತಿಲ್ಲ ಎಂದು ತಿರುಗೇಟು ನೀಡಿದ್ದಾರೆ.
 
ಪಾಕಿಸ್ತಾನದ ಮುಜಾಫರಾಬಾದ್‌ನಲ್ಲಿ ಆಯೋಜಿಸಲಾದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಷರೀಫ್, ಕಾಶ್ಮಿರ ಪಾಕಿಸ್ತಾನದ ಭಾಗವಾಗುವುದನ್ನು ನೋಡಲು ಕಾತುರದಿಂದ ಇದ್ದೇನೆ ಎಂದು ಹೇಳಿದ್ದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ