36 ಗಂಟೆಗಳಲ್ಲಿ 5 ಬಾರಿ ಕದನ ವಿರಾಮ ಉಲ್ಲಂಘನೆ

ಮಂಗಳವಾರ, 4 ಅಕ್ಟೋಬರ್ 2016 (09:33 IST)
ಪಾಕಿಸ್ತಾನ ಮತ್ತೆ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದು  ಕಳೆದ 36 ಗಂಟೆಗಳಲ್ಲಿ ಐದು ಬಾರಿ ಇದನ್ನು ಪುನರಾವರ್ತಿಸಿದೆ. ಜಮ್ಮು ಮತ್ತು ಕಾಶ್ಮೀರದ ನೌಷೇರಾ ಸೆಕ್ಟರ್‌ನಲ್ಲಿ ಇಂದು ಬೆಳಿಗ್ಗೆ ಗುಂಡಿನ ದಾಳಿ ನಡೆಸಿ ಭಾರತದ ತಾಳ್ಮೆ ಪರೀಕ್ಷೆ ನಡೆಸುತ್ತಿದೆ. ಪಾಕಿಸ್ತಾನದ ಸೇನಾ ದಾಳಿಗೆ ಭಾರತೀಯ ಸೈನಿಕರು ತಕ್ಕ ಪ್ರತ್ಯುತ್ತರವನ್ನು ನೀಡಿದೆ. 
ಉರಿ ಸೇನಾ ನೆಲಯ ಮೇಲೆ ಪಾಕ್ ಪ್ರಚೋದಿತ ಉಗ್ರರ ದಾಳಿ ನಡೆಸಿದ ಬೆನ್ನಲ್ಲಿ ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿ ಸೇಡು ತೀರಿಸಿಕೊಂಡಿತ್ತು. ಇಂತಹ ಖಡಕ್ ಉತ್ತರ ನೀಡಿದರೂ ಪಾಕ್ ಮತ್ತೆ ಮತ್ತೆ ಉದ್ದಟತನವನ್ನು ಮೆರೆಯುತ್ತಿದೆ.
 
ಜಮ್ಮು ಮತ್ತು ಕಾಶ್ಮೀರದ ಬರಾಮುಲ್ಲಾ ಪ್ರದೇಶದಲ್ಲಿನ 46 ರೈಫಲ್ಸ್ ಕ್ಯಾಂಪ್ ಮೇಲೆ ಭಾನುವಾರ ತಡರಾತ್ರಿ ಎರಡು ತಂಡಗಳಾಗಿ ಬಂದಿದ್ದ ಉಗ್ರರು ದಾಳಿ ನಡೆಸಿದ್ದು ಸೈನಿಕರು ತ್ವರಿತ ಪ್ರತಿದಾಳಿ ನಡೆಸಿದ್ದರು.
 
ಎರಡು ಕಡೆಯಿಂದ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಬಿಎಸ್‌ಎಫ್ ಯೋಧ ಹುತಾತ್ಮನಾಗಿದ್ದಾನೆ. ಇಬ್ಬರು ಭಯೋತ್ಪಾದಕರನ್ನು ಯಮಪುರಿಗೆ ಅಟ್ಟಲಾಗಿದೆ.ಇನ್ನೊಬ್ಬ ಝೇಲಂ ನದಿಗೆ ಹಾರಿ ಪರಾರಿಯಾಗಿದ್ದಾನೆ.
 
ಸುಮಾರು ಒಂದುವರೆ ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಸೇನೆಯ ಮೂವರು ಹಾಗೂ ಬಿಎಸ್‌ಎಫ್‌ನ ಇಬ್ಬರು ಯೋಧರು ಗಾಯಗೊಂಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ