ಶ್ರೀನಗರ: ಪಾಕ್ ಗುಪ್ತಚರ ಸಂಸ್ಥೆ ಐಎಸ್‌ಐ ಜಮ್ಮು-ಕಾಶ್ಮೀರ ಮತ್ತು ಪಂಜಾಬ್ ನಲ್ಲಿ ಇನ್ನು15 ದಿನಗಳಲ್ಲಿ ಭಾರೀ ವಿಧ್ವಂಸಕ ಕೃತ್ಯನಡೆಸಲು ಸಂಚು ರೂಪಿಸಿದ್ದು, ಇದಕ್ಕಾಗಿ ನಾಲ್ವರು ಉಗ್ರರು ಪಂಜಾಬ್ ಗಡಿ ಮೂಲಕ ದೇಶದೊಳಗೆ ನುಸುಳಿ ಬಂದಿದ್ದಾರೆ ಎಂದು ಭಾರತೀಯ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಜಮ್ಮು ಸಮೀಪದ ಕಥುವಾ, ಪಂಜಾಬ್ ನಲ್ಲಿನ ಗುರುದಾಸ್‌ಪುರ ಮತ್ತು ಪಠಾಣ್‌ಕೋಟ್‌ನಲ್ಲಿ ಪಾಕ್ ಐಎಸ್‌ಐ ಆಯೋಜಿತ ಉಗ್ರರು ದಾಳಿಗಳನ್ನು ನಡೆಸುವ ಸಂಭವವಿದೆ. ಈ ಬಗ್ಗೆ ಸಾಕಷ್ಟು ಮುಂಜಾಗ್ರತೆ ಅಗತ್ಯ ಎಂದು ಗುಪ್ತಚರ ವರದಿ ತಿಳಿಸಿದೆ. ನಾಲ್ಕು ಪಾಕ್ ಉಗ್ರರು ಪಂಜಾಬ್ ಗಡಿ ಮೂಲಕ ಬಮ್‌ತಾಲ್ ವಲಯದೊಳಗೆ ನುಸುಳಿ ಬಂದಿದ್ದಾರೆ. ಇವರು ಜಮ್ಮು ಕಾಶ್ಮೀರ ಮತ್ತು ಪಂಜಾಬ್ ನಲ್ಲಿ ಭಾರೀ ದೊಡ್ಡ ಉಗ್ರ ದಾಳಿಗಳನ್ನು ನಡೆಸುವ ಸಾಧ್ಯತೆ ಇದೆ.