10 ದಿನಗಳಲ್ಲಿ 23 ಬಾರಿ ಕದನ ವಿರಾಮ ಉಲ್ಲಂಘನೆ

ಶುಕ್ರವಾರ, 7 ಅಕ್ಟೋಬರ್ 2016 (09:09 IST)
ಅಂತರಾಷ್ಟ್ರೀಯ ಗಡಿ ರೇಖೆಯ ಬಳಿ ಪಾಕಿಸ್ತಾನ ಸೇನೆ ಮತ್ತೆ ಕದನವಿರಾಮವನ್ನು ಉಲ್ಲಂಘಿಸಿದೆ. ಫೂಂಚ್ ಬಳಿ ನಿನ್ನೆ ತಡರಾತ್ರಿಯಿಂದ ಆರಂಭವಾಗಿರುವ ಗುಂಡಿನ ಸದ್ದು ಈಗಲೂ ಮುಂದುವರೆದಿದೆ. 

ತಮ್ಮನ್ನು ಗುರಿಯಾಗಿಸಿಕೊಂಡು ದಿನನಿತ್ಯ ಗುಂಡಿನ ದಾಳಿ ನಡೆಸುತ್ತಿರುವ ಪಾಕಿಸ್ತಾನಕ್ಕೆ ಭಾರತೀಯ ಸೇನೆ ತಕ್ಕ ಉತ್ತರ ನೀಡುತ್ತಿದೆ. 
 
ಉಗ್ರರ ದಮನ ಮಾಡಬೇಕು ಎಂದು ಮೇಲ್ನೋಟಕ್ಕೆ ಹೇಳುವ ಪಾಕಿಸ್ತಾನ ಗಡಿಯಲ್ಲಿ ತನ್ನ ಹಳೆಯ ಚಾಳಿಯನ್ನು ಮುಂದುವರೆಸಿದೆ. ಕಳೆದ 10 ದಿನಗಳಲ್ಲಿ ಪಾಕಿಸ್ತಾನ ಒಟ್ಟು 23 ಬಾರಿ ಗುಂಡಿನ ದಾಳಿ ನಡೆಸಿದೆ.
 
ನಿನ್ನೆ ಮುಂಜಾನೆ 5ಗಂಟೆ ಸುಮಾರಿಗೆ ಮೂವರು ಉಗ್ರರು  ಲಂಗೇಟ್‌ನಲ್ಲಿರುವ ಸೇನಾಕ್ಯಾಂಪ್‌‌ನಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸಲು ಪ್ರಯತ್ನಿಸಿದ್ದರು. ಉಗ್ರರು ಗುಂಡಿನ ದಾಳಿ ನಡೆಸುತ್ತಿದ್ದಂತೆ ಎಚ್ಚೆತ್ತುಕೊಂಡ ಸೈನಿಕರು ಮೂವರು ಉಗ್ರರನ್ನು ಹೊಡೆದುರುಳಿಸಿದ್ದರು.
 
ಸರ್ಜಿಕಲ್ ಸ್ಟ್ರೈಟ್ ಬಳಿಕ ಉಗ್ರರು ಪದೇ ಪದೇ ಗಡಿಯಲ್ಲಿ  ಒಳನುಗ್ಗಲು ಪ್ರಯತ್ನಿಸುತ್ತಿರುವುದರಿಂದ ಅಂತರಾಷ್ಟ್ರೀಯ ಗಡಿ ರೇಖೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ