ಲವ್ ಮ್ಯಾರೇಜ್: ಪುತ್ರಿಯನ್ನು ಜೀವಂತವಾಗಿ ದಹಿಸಿದ ತಾಯಿ

ಬುಧವಾರ, 8 ಜೂನ್ 2016 (20:16 IST)
ಪ್ರೇಮವಿವಾಹ ಮಾಡಿಕೊಂಡ ಯುವತಿಯೊಬ್ಬಳನ್ನು ಆಕೆಯ ತಾಯಿ ಮತ್ತು ಸಹೋದರ ಪೆಟ್ರೋಲ್ ಸುರಿದು ಜೀವಂತವಾಗಿ ದಹಿಸಿದ ಹೇಯ ಘಟನೆ ವರದಿಯಾಗಿದೆ.
 
ಪಾಕಿಸ್ತಾನದಲ್ಲಿ ನಿರಂತರವಾಗಿ ನಡೆಯುತ್ತಿರುವ ಮರ್ಯಾದೆ ಹತ್ಯೆಗಳ ಸಾಲಿನಲ್ಲಿ ಮತ್ತೊಂದು ಪ್ರಕರಣ ದಾಖಲಾದಂತಾಗಿದೆ. 
 
ಜೀನತ್ ಎನ್ನುವ 18 ವರ್ಷದ ಯುವತಿ ತಾನು ಇಷ್ಟಪಟ್ಟ ವ್ಯಕ್ತಿಯೊಂದಿಗೆ ಓಡಿಹೋಗಿ ವಿವಾಹವಾಗಿರುವುದು ಆಕೆ ಮಾಡಿದ ಘನಘೋರ ತಪ್ಪಾಗಿದೆ ಎಂದು ಆಕೆಯ ತಾಯಿ ಪರ್ವಿನ್ ಆಕ್ರೋಶ ವ್ಯಕ್ತಪಡಿಸಿದ್ದಾಳೆ.
 
ಪುತ್ರಿ ಕ್ಷಮಿಸಲಾರದಂತಹ ತಪ್ಪು ಮಾಡಿದ್ದರಿಂದ ನಾನೇ ಆಕೆಯನ್ನು ಹತ್ಯೆ ಮಾಡಿದ್ದೇನೆ. ಇದರಲ್ಲಿ ನನ್ನ ಪುತ್ರನ ಪಾತ್ರವಿಲ್ಲ ಎಂದು ಜೀನತ್ ತಾಯಿ ಪರ್ವಿನ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ.
 
ಜೀನತ್ ತನ್ನದೇ ಬಡಾವಣೆಯಲ್ಲಿರುವ ಹಸನ್ ಎನ್ನುವ ಯುವಕನೊಂದಿಗೆ ಪ್ರೇಮಪಾಶದಲ್ಲಿ ಸಿಲುಕಿದ್ದಳು. ನಮ್ಮಿಬ್ಬರ ವಿವಾಹಕ್ಕೆ ಒಪ್ಪಿಕೊಳ್ಳುವಂತೆ ಪೋಷಕರಿಗೆ ಕೋರಿದ್ದಾಳೆ. ಆದರೆ, ಪೋಷಕರು ನಿರಾಕರಿಸಿದ್ದರಿಂದ ಜೀನತ್ ಪ್ರೇಮಿ ಹಸನ್‌ನೊಂದಿಗೆ ಓಡಿ ಹೋಗಿ  ನ್ಯಾಯಾಲಯದಲ್ಲಿ ವಿವಾಹವಾಗಿದ್ದಳು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ