ಸೇನಾ ಎನ್‌ಕೌಂಟರ್ ಹೊಣೆ ಹೊತ್ತುಕೊಂಡಿದ್ದ ಸೇನಾಧಿಕಾರಿ ಮೇಜರ್ ಜನರಲ್ ಅಶೋಕ್ ನರುಲಾ ಮಾತನಾಡಿ, ಉಗ್ರರೊಂದಿಗಿನ ಎನ್‌ಕೌಂಟರ್ ಅಂತ್ಯವಾಗಿದ್ದು, ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಉಗ್ರರಿಂದ ಎರಡು ಶಸ್ತ್ರಾಸ್ತ್ರಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಎರಡು ದಿನಗಳ ವರೆಗೆ ಎನ್‌ಕೌಂಟರ್ ಮುಂದುವರಿದಿರುವುದು ಯಾಕೆ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಉಗ್ರರು ಬೃಹತ್ ಕಟ್ಟಡದೊಳಗೆ ಅವಿತುಕೊಂಡಿದ್ದರಿಂದ, ಕಾರ್ಯಾಚರಣೆ ತುಂಬಾ ಕಷ್ಟವಾಗಿತ್ತು ಎಂದು ಮಾಹಿತಿ ನೀಡಿದ್ದಾರೆ,