ಎಐಡಿಎಂಕೆ ಪಕ್ಷದಿಂದ ಪನ್ನೀರ್ ಸೆಲ್ವಂ ಉಚ್ಛಾಟನೆ?

ಬುಧವಾರ, 8 ಫೆಬ್ರವರಿ 2017 (06:48 IST)
ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಬಂಡಾಯದ ಹಿಂದೆ ಡಿಎಂಕೆ ಪಕ್ಷದ ಕೈವಾಡವಿದೆ. ಅಧಿವೇಶನದಲ್ಲಿ ಸ್ಟಾಲಿನ್ ಜೊತೆ ಸೆಲ್ವಂ ನಗುತ್ತಿದ್ದರು. ಹೀಗಾಗಿ ಅವರನ್ನು ಪಕ್ಷದ ಹುದ್ದೆ ಹಾಗೂ ಸದಸ್ಯೆತ್ವ ಸ್ಥಾನದಿಂದ ಉಚ್ಛಾಟನೆ ಮಾಡುತ್ತೇವೆ ಎಂದು ಚಿನ್ನಮ್ಮ ಶಶಿಕಲಾ ನಟರಾಜನ್ ಎಚ್ಚರಿಕೆ ನೀಡಿದ್ದಾರೆ.
ಸೆಲ್ವಂ ಬಂಡಾಯದ ಹಿನ್ನೆಲೆಯಲ್ಲಿ ಚಿನ್ನಮ್ಮ ಶಶಿಕಲಾ ನಟರಾಜನ್ ಅವರು ನಿನ್ನೆ ಮಧ್ಯ ರಾತ್ರಿ ಚೆನ್ನೈನ ಪೋಯಸ್ ಗಾರ್ಡನ್‌ನಲ್ಲಿ ತುರ್ತ ಸಭೆ ಕರೆದಿದ್ದರು. ಈ ಮಹತ್ವದ ಸಭೆಯಲ್ಲಿ 20 ಸಚಿವರು ಹಾಗೂ 80 ಶಾಸಕರು ಪಾಲ್ಗೊಂಡಿದ್ದರು. 
 
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಶಿಕಲಾ ನಟರಾಜನ್, ಎಐಡಿಎಂಕೆ ಶಾಸಕರು ಕುಟುಂಬ ಇದ್ದಂತೆ. ಪಕ್ಷದಲ್ಲಿ 134 ಶಾಸಕರ ಒಗ್ಗಟ್ಟಿನಿಂದ ಇದ್ದೇವೆ. ಪನ್ನೀರ್ ಸೆಲ್ವಂ ಬಂಡಾಯದ ಹಿಂದೆ ಡಿಎಂಕೆ ಪಕ್ಷದ ಕೈವಾಡವಿದೆ. ಅಧಿವೇಶನದಲ್ಲಿ ಸ್ಟಾಲಿನ್ ಜೊತೆ ಸೆಲ್ವಂ ನಗುತ್ತಿದ್ದರು. ಹೀಗಾಗಿ ಅವರನ್ನು ಪಕ್ಷದ ಹುದ್ದೆ ಹಾಗೂ ಸದಸ್ಯೆತ್ವ ಸ್ಥಾನದಿಂದ ಉಚ್ಛಾಟನೆ ಮಾಡುತ್ತೇವೆ ಎಂದರು. 
 
ನನ್ನನ್ನ ನಿರಂತರವಾಗಿ ಅವಮಾನಿಸಲಾಯ್ತು ಮತ್ತು ಬಲವಂತವಾಗಿ ನನ್ನ.ರಾಜೀನಾಮೆ ಪಡೆಯಲಾಯ್ತು. ಶಶಿಕಲಾ ಬೆಂಬಲಿಗರಿಂದ ನನ್ನ ಮೇಲೆ ಒತ್ತಡವಿದೆ ಎಂದು ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಪಕ್ಷದ ವಿರುದ್ಧ ಬಂಡಾಯ ಎದ್ದಿದ್ದರು. 
 

ವೆಬ್ದುನಿಯಾವನ್ನು ಓದಿ