ಹೈಕಮಾಂಡ್ ಮುಂದೆ ವಿಪಕ್ಷ ನಾಯಕನ ಸ್ಥಾನಕ್ಕೆ ಪರಮೇಶ್ವರ್ ಮನವಿ

ಶನಿವಾರ, 28 ಡಿಸೆಂಬರ್ 2019 (10:22 IST)
ನವದೆಹಲಿ : ಕೆಪಿಸಿಸಿ  ಅಧ್ಯಕ್ಷ ಪಟ್ಟ ವಿಚಾರಕ್ಕೆ ಸಂಬಂಧಪಟ್ಟಂತೆ 3 ದಿನಗಳ ಹಿಂದೆ ಹೈಕಮಾಂಡ್ ಬುಲಾವ್ ನೀಡಿರುವ ಹಿನ್ನಲೆಯಲ್ಲಿ  ಡಾ.ಜಿ.ಪರಮೇಶ್ವರ್ ಅವರು ದೆಹಲಿಗೆ ತೆರಳಿದ್ದಾರೆ.



ದೆಹಲಿಯಲ್ಲಿ ತೆರಳಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯನ್ನು ಭೇಟಿಯಾದ ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ಪಕ್ಷ ಸಂಘಟನೆಯ ಬಗ್ಗೆ ವಿವರ ನೀಡಿದ್ದಾರೆ ಎನ್ನಲಾಗಿದೆ.  8 ವರ್ಷ ಕೆಪಿಸಿಸಿ ಅಧ್ಯಕ್ಷರಾಗಿದ್ದ ಹಿನ್ನಲೆ ಪರಮೇಶ್ವರ್ ರನ್ನ ಹೈಕಮಾಂಡ್ ವಿಶ್ವಾಸಕ್ಕೆ ಪಡೆದಿದ್ದಾರೆ.


ಅಲ್ಲದೇ ಈ ವೇಳೆ ವಿಪಕ್ಷ ನಾಯಕನ ಸ್ಥಾನಕ್ಕೆ ಪರಮೇಶ್ವರ್ ಮನವಿ ಮಾಡಿದ್ದು, ಅವಕಾಶ ಕೊಟ್ರೆ ಜವಾಬ್ದಾರಿ ನಿರ್ವಹಿಸಲು ಸಿದ್ಧ ಎಂದು ಹೇಳಿದ್ದಾರೆ ಎನ್ನಲಾಗಿದೆ. ಹಾಗೇ  ಶೀಘ್ರದಲ್ಲಿಯೇ ಪರಮೇಶ್ವರ್ ಮತ್ತೊಮ್ಮೆ ದೆಹಲಿಗೆ ತೆರಳೋ ಸಾಧ್ಯತೆ ಇದೆ ಎನ್ನಲಾಗಿದೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ