ಪ್ರೀತಿಸಿ ಓಡಿ ಹೋಗಿದ್ದ ಮಗಳ ಕತ್ತು ಸೀಳಿ ಕೊಂದ ಪೋಷಕರು
ಮಗಳು ಅನ್ಯ ಕೋಮಿನ ಯುವಕನ ಜೊತೆ ಓಡಿ ಹೋಗಿ ಜೊತೆಯಾಗಿ ಜೀವನ ಮಾಡುತ್ತಿದ್ದಳು. ಆದರೆ ಪೋಷಕರು ಮಗಳು ನಾಪತ್ತೆಯಾಗಿರುವುದಾಗಿ ದೂರು ನೀಡಿದ್ದರು. ಹೀಗಾಗಿ ಪೊಲೀಸರು ವಿಚಾರಣೆ ನಡೆಸಿ ಯುವಕನನ್ನು ವಶಕ್ಕೆ ಪಡೆದು ಯುವತಿಯನ್ನು ಪೋಷಕರ ಬಳಿಗೊಪ್ಪಿಸಿದ್ದರು.
ಆದರೆ ಮನೆಗೆ ಬಂದ ಮಗಳ ಜೊತೆ ನಿತ್ಯವೂ ವಾಗ್ವಾದವಾಗುತ್ತಿತ್ತು. ಮನೆಗೆ ಅವಮಾನ ಮಾಡಿದ ಮಗಳನ್ನು ಕೊನೆಗೆ ಪೋಷಕರೇ ಕೊಲೆ ಮಾಡಿದ್ದಾರೆ. ಇದೀಗ ಪೊಲೀಸರು ಪೋಷಕರಿಬ್ಬರನ್ನೂ ಬಂಧಿಸಿದ್ದಾರೆ.