ಪೆಟ್ರೋಲ್, ಡೀಸೆಲ್ ಮನೆ ಬಾಗಿಲಿಗೆ ಬರುತ್ತಂತೆ..!

ಶನಿವಾರ, 22 ಏಪ್ರಿಲ್ 2017 (00:19 IST)
ಎಲ್`ಪಿಜಿ ಹೋಂ ಡೆಲಿವರಿ ರೀತಿ ಪೆಟ್ರೋಲ್, ಡೀಸೆಲ್ ಸಹ ಮನೆ ಬಾಗಿಲಿಗೆ ಬರುವ ಕಾಲ ದೂರ ಉಳಿದಿಲ್ಲ.  ಇಂಥದ್ದೊಂದು ಚಿಂತನೆಯನ್ನ ಸರ್ಕಾರವೇ ಜನರ ಮುಂದಿಟ್ಟಿದೆ.

ಪೆಟ್ರೋಲ್ ಬಂಕ್`ಗಳ ಮುಂದೆ ಉದ್ದುದ್ದ ಕ್ಯೂ ತಪ್ಪಿಸಲು ಪ್ರೀ ಬುಕ್ಕಿಂಗ್ ಮೂಲಕ ಮನೆ ಮನೆಗೆ ಪೆಟ್ರೋಲ್ ತಲುಪಿಸುವ ವಿನೂತನ ಚಿಂತನೆ ಮಾಡಲಾಗುತ್ತಿದೆ ಎಂದು ಪೆಟ್ರೋಲಿಯಂ ಸಚಿವಾಲಯದಿಂದ ಟ್ವೀಟ್ ಮಾಡಲಾಗಿದೆ.

ದೇಶಾದ್ಯಂತ ಮೇ1ರಿಂದ ನಿತ್ಯ ತೈಲ ದರ ಪರಿಷ್ಕರಣೆಯನ್ನ ಪ್ರಾಯೋಗಿಕವಾಗಿ 5 ನಗರಗಳಲ್ಲಿ ಶುರು ಮಾಡಲು ಮುಂದಾಗಿರುವ ಸಚಿವಾಲಯ ಇದೀಗ ಹೊಸದೊಂದು ಚಿಂತನೆಗೆ ಮುಂದಾಗಿದೆ. ಇದೇವೇಳೆ, ಕಮಿಶನ್ ಹೆಚ್ಚಿಸದಿದ್ದರೆ ಭಾನುವಾರ ರಜೆ ಮಾಡುವ ಪೆಟ್ರೋಲ್ ಬಂಕ್ ಮಾಲೀಕರ ನಿರ್ಧಾರಕ್ಕೆ ನಮ್ಮ ಸಮ್ಮತಿ ಇಲ್ಲ ಎಂದು ಪೆಟ್ರೋಲಿಯಂ ಸಚಿವಾಲಯ ಸ್ಪಷ್ಟಪಡಿಸಿದೆ.

ವೆಬ್ದುನಿಯಾವನ್ನು ಓದಿ