ಪ್ರಧಾನಿ ಮೋದಿ-ಅಮಿತ್ ಶಾ ಜುಗಲ್ ಬಂದಿಗೆ ಉರುಳಿತೇ ಮಹಾಘಟಬಂಧನ್?

ಗುರುವಾರ, 27 ಜುಲೈ 2017 (09:24 IST)
ಪಾಟ್ನಾ: ಬಿಹಾರದಲ್ಲಿ ಇಂತಹದ್ದೊಂದು ರಾಜಕೀಯ ಬೆಳವಣಿಗೆಗೆ ಅದೆಷ್ಟೋ ದಿನದಿಂದ ಪೂರ್ವಭಾವಿ ಬೆಳವಣಿಗೆಗಳು ನಡೆಯುತ್ತಲೇ ಇತ್ತು. ಅಂತೂ ವಿರೋಧ ಪಕ್ಷಗಳ ಮಹಾಘಟಬಂಧನ ಒಡೆದು ಮತ್ತೆ ಹಳೆಯ ಗೆಳೆಯನನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಬಿಜೆಪಿ ಯಶಸ್ವಿಯಾಗಿದೆ.


ನೋಟು ಅಮಾನ್ಯ ಎಂಬ ಪ್ರಧಾನಿ ಮೋದಿಯವರ ನಿರ್ಧಾರ ನಿತೀಶ್ ಕುಮಾರ್ ಮರಳಿ ಬಿಜೆಪಿಗೆ ಬರಲು ಮೊದಲ ಅಡಿಗಲ್ಲಾಯಿತು ಎಂದರೆ ತಪ್ಪಲ್ಲ. ಅಲ್ಲಿಯವರೆಗೆ ಮೋದಿಯವರನ್ನು ಕಂಡರೆ ಕತ್ತಿ ಮಸೆಯುತ್ತಿದ್ದ ನಿತೀಶ್ ದಿಡೀರ್ ಮೆತ್ತಗಾದರು. ಬಹುಶಃ ಅಷ್ಟು ದಿನ ರಾಜನಂತೆ ಮೆರೆಯುತ್ತಿದ್ದ ಅವರಿಗೆ ಲಾಲೂ ಪ್ರಸಾದ್ ಯಾದವ್ ತಾಳಕ್ಕೆ ತಕ್ಕಂತೆ ಕುಣಿಯಲು ಬೇಸರವಾಗಿರಬಹುದು.

ಅಲ್ಲಿಂದ ಸಿಡಿದೇಳಲು ಪ್ರಾರಂಭಿಸಿದ ನಿತೀಶ್ ಇದೀಗ ಸರ್ಕಾರವನ್ನೇ ಉರುಳಿಸುವವರೆಗೆ ತಲುಪಿದ್ದಾರೆ. ರಾಷ್ಟ್ರಪತಿ ಚುನಾವಣೆ ಎಂಬುದು ಮಹಾಘಟಬಂಧನ್ ಮುರಿದು ಬೀಳುವ ವೇದಿಕೆಯಾಯಿತು. ಲಾಲೂ ತಮ್ಮ ಎಂದಿನ ಹಠ ಮುಂದುವರಿಸಿದ್ದಕ್ಕೆ ಕಾಂಗ್ರೆಸ್ ಬಹುದೊಡ್ಡ ಮೈತ್ರಿ ಪಕ್ಷವನ್ನು ಕಳೆದುಕೊಂಡಿದೆ.

ಆದರೆ ಕಾಂಗ್ರೆಸ್ ಮುಕ್ತ ದೇಶ ಮಾಡಲು ಹೊರಟಿರುವ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಯೋಜನೆ ಸರಿಯಾಗಿಯೇ ಕೆಲಸ ಮಾಡುತ್ತಿದೆ. ಲಾಲೂ-ನಿತೀಶ್ ನಡುವೆ ಇದ್ದ ಸಣ್ಣ ಮಟ್ಟಿನ ಬಿರುಕಿನ ಲಾಭ ಪಡೆದ ಈ ಇಬ್ಬರು ಚಾಣಕ್ಷ್ಯರು ಹಳೆಯ ಗೆಳೆಯನನ್ನು ಮರಳಿ ಪಡೆಯಲು ಯಶಸ್ವಿಯಾದರು. ಅಲ್ಲದೆ, ನಿತೀಶ್ ರನ್ನು ಮತ್ತೆ ಸ್ವಾಗತಿಸಿ ಪ್ರಧಾನಿ ಮೋದಿ ಮಾಡಿದ ಟ್ವೀಟ್ ಇದೆಲ್ಲಾ ಪೂರ್ವ ನಿಯೋಜಿತ ರಾಜಕೀಯ ತಂತ್ರಗಾರಿಕೆ ಎನ್ನುವುದನ್ನು ಸ್ಪಷ್ಟಪಡಿಸಿದೆ. ಆದರೆ ಈ ಮಹಾಘಟಬಂಧನ್ ಮುರಿದಿದ್ದರಿಂದ ನಷ್ಟವಾಗಿದ್ದು, ಕೇವಲ ಬಿಹಾರದ ಆರ್ ಜೆಡಿಗೆ ಮಾತ್ರವಲ್ಲ, ಯುಪಿಎ ಕೂಟದ ಇತರ ಮಿತ್ರ ಪಕ್ಷಗಳಿಗೂ ಕೂಡ.

ಇದನ್ನೂ ಓದಿ..  ಯಾವ ಹೊತ್ತಿನಲ್ಲಿ ಸ್ನಾನ ಮಾಡುವುದು ಉತ್ತಮ ಗೊತ್ತಾ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ