ರಾಮಲಲ್ಲಾನನ್ನು ನೋಡಲು ಬರುವಾಗ ಪ್ರಧಾನಿ ಮೋದಿ ತಂದ ಉಡುಗೊರೆ ಏನು ಗೊತ್ತಾ?
ದೇವರನ್ನು ನೋಡಲು ಬರುವಾಗ ಬರಿಗೈಯಲ್ಲಿ ಬರಬಾರದು ಎಂಬ ನಿಯಮವಿದೆ. ಅದೇ ರೀತಿ ಪ್ರಧಾನಿ ಮೋದಿ ರಾಮಲಲ್ಲಾನಿಗೆ ವಿಶೇಷ ಉಡುಗೊರೆ ನೀಡಿದ್ದಾರೆ.
ರಾಮಮಂದಿರವನ್ನು ಪ್ರವೇಶ ಮಾಡುವಾಗ ಮೋದಿ ಕೈಯಲ್ಲಿ ವಸ್ತ್ರ, ಜೊತೆಗೆ ಬೆಳ್ಳಿಯ ಕಿರೀಟ ಆಭರಣಗಳನ್ನು ಹೊತ್ತು ತಂದಿದ್ದಾರೆ. ಇದನ್ನು ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನೆರವೇರಿಸಿದ ಬಳಿಕ ರಾಮಲಲ್ಲಾನ ಪಾದದ ಅಡಿಯಲ್ಲಿಟ್ಟು ಸಮರ್ಪಿಸಿದ್ದಾರೆ. ಪೂಜಾ ವಿಧಿ ವಿಧಾನದ ಬಳಿಕ ಪ್ರಧಾನಿ ಮೋದಿ ಆರತಿ ಬೆಳಗಿ ರಾಮನಿಗೆ ಮೊದಲ ಪೂಜೆ ನೆರವೇರಿಸಿದ್ದಾರೆ.
ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗಿರುವ ರಾಮಲಲ್ಲಾನಿಗೆ ಚಿನ್ನ, ವಜ್ರದ ಆಭರಣಗಳನ್ನು ತೊಡಿಸಿ ಅಲಂಕಾರ ಮಾಡಲಾಗಿದೆ. ಜೊತೆಗೆ ಹೂವಿನ ಅಲಂಕಾರಗಳೊಂದಿಗೆ ಪ್ರಭು ರಾಮ ಕಣ್ಮನ ಸೆಳೆಯುತ್ತಿದ್ದಾನೆ.