ಮುಂಬೈ: 98 ನೇ ಅಖಲ ಭಾರತ ಮರಾಠಿ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರಧಾನಿ ಮೋದಿ ಎನ್ ಸಿಪಿ ನಾಯಕ ಶರದ್ ಪವಾರ್ ಜೊತೆ ನಡೆದುಕೊಂಡ ರೀತಿಗೆ ರಾಜಕೀಯ ವಲಯ ಮತ್ತು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ವಿಡಿಯೋ ಈಗ ವೈರಲ್ ಆಗಿದೆ.
ರಾಜಕೀಯವಾಗಿ ಶರದ್ ಪವಾರ್ ತಮ್ಮ ಎದುರಾಳಿಯಾಗಿದ್ದರೂ ಈ ಕಾರ್ಯಕ್ರಮದಲ್ಲಿ ರಾಜಕೀಯ ವೈಷಮ್ಯ ಮರೆತು ಮೋದಿ ಮಾನವೀಯತೆ ಪ್ರದರ್ಶಿಸಿದ್ದಾರೆ. ಕಾರ್ಯಕ್ರಮದ ವೇದಿಕೆಯಲ್ಲಿ ಮೋದಿ ಮತ್ತು ಶರದ್ ಪವಾರ್ ಪರಸ್ಪರ ಅಕ್ಕಪಕ್ಕವೇ ಕುಳಿತಿದ್ದರು.
ಭಾಷಣ ಮುಗಿಸಿ ಬಂದ ಶರದ್ ಪವಾರ್ ಗೆ ಕುರ್ಚಿ ಸರಿಸಿ ಕುಳಿತುಕೊಳ್ಳಲು ಸಹಾಯ ಮಾಡಿದ್ದಾರೆ. ಬಳಿಕ ಅವರಿಗೆ ಕುಡಿಯಲು ತಾವೇ ಸ್ವತಃ ಬಾಟಲಿ ಓಪನ್ ಮಾಡಿ ನೀರು ನೀಡಿದ್ದಾರೆ. ಮೋದಿ ಈ ವರ್ತನೆಗೆ ಭಾರೀ ಹೊಗಳಿಕೆ ವ್ಯಕ್ತವಾಗಿದೆ.
ರಾಜಕೀಯ ವೈಷಮ್ಯಗಳು ಏನೇ ಇರಲಿ, ವೈಯಕ್ತಿಕವಾಗಿ ಈ ರೀತಿ ಪ್ರಬುದ್ಧತೆ ಮೆರೆಯುವುದು ನಿಜಕ್ಕೂ ಅಭಿನಂದನಾರ್ಹ ಎಂದು ನೆಟ್ಟಿಗರು ಹೊಗಳಿದ್ದಾರೆ. ಕೆಲವು ದಿನಗಳ ಹಿಂದೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಕೂಡಾ ಮಂಡಿನೋವಿನಿಂದ ವೀಲ್ ಚೇರ್ ನಲ್ಲಿದ್ದ ಸಿಎಂ ಸಿದ್ದರಾಮಯ್ಯ ಏಳದಂತೆ ಕೈ ಹಿಡಿದು ಕೂರಿಸಿದ ಘಟನೆ ಎಲ್ಲರ ಗಮನ ಸೆಳೆದಿತ್ತು.