ಪ್ರಧಾನಿ ಮೋದಿಯಿಂದ ವಿಶ್ವದ ಅತಿ ಎತ್ತರದ ಪ್ರತಿಮೆ ಲೋಕಾರ್ಪಣೆ

ಶುಕ್ರವಾರ, 24 ಫೆಬ್ರವರಿ 2017 (19:55 IST)
ಪವಿತ್ರದಿನವಾದ ಶಿವರಾತ್ರಿ ಹಬ್ಬದ ದಿನದಂದು ಪದ್ಮಭೂಷಣ ಜಗ್ಗಿ ವಾಸುದೇವ್ ನೇತೃತ್ವದ ಈಶಾ ಫೌಂಡೇಷನ್ ನಿರ್ಮಿಸಿರುವ ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ.
ಶಿವನ ಪ್ರತಿಮೆ ಅನಾವರಣಗೊಳಿಸಿದ ನಂತರ ಭಾಷಣ ಮಾಡಿದ ಅವರು, ಶಿವನ 112 ಯೋಗಿ ದಾರಿಗಳನ್ನು ಹುಡುಕುವ ನಿಟ್ಟಿನಲ್ಲಿ 112 ಅಡಿ ಎತ್ತರದ ಶಿವನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಭಾರತ ವಿವಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ವಿವಿಧತೆಯೇ ಭಾರತದ ದೊಡ್ಡ ಶಕ್ತಿ. ಪರಶಿವ ಸರ್ವವ್ಯಾಪಿ. ಆತ ಎಲ್ಲಾ ಕಡೆ ಇದ್ದಾನೆ. ಈ ಸ್ಥಳ ಶಿವಮಯವಾಗುವುದಕ್ಕೆ ಎಲ್ಲರನ್ನು ಪ್ರೇರೇಪಿಸುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.  
 
ಯೋಗಾಭ್ಯಾಸದಿಂದ ಏಕಾಗ್ರತೆ ಹೆಚ್ಚುತ್ತದೆ. ನಮ್ಮವರ ಮೇಲಿನ ಪ್ರೀತಿ ಹೆಚ್ಚುತ್ತದೆ. ಯೋಗ ಜೀವನದಿಂದ ಶಿವನೆಡೆಗೆ ಸಾಗುವ ದಾರಿಯಾಗಿ ಪರಿವರ್ತನೆಯಾಗುತ್ತದೆ.
 
ಯೋಗಾ ಆರೋಗ್ಯಕ್ಕೆ ಒಂದು ರೀತಿ ಪಾಸ್‌ಪೋರ್ಟ್ ಇದ್ದಂತೆ. ಯೋಗದಿಂದ ರೋಗಮುಕ್ತಿ, ಭೋಗಮುಕ್ತಿಯಾಗುತ್ತದೆ. ದೇಹದಲ್ಲಿ ಪವಿತ್ರ ಶಕ್ತಿಯ ಸಂಚಾರವಾಗುತ್ತದೆ. ದೈಹಿತ ವ್ಯಾಯಾಮಗಿಂತ ಯೋಗ ತುಂಬಾ ಉಪಯುಕ್ತವಾಗಿರುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ