ಪ್ರಧಾನಿ ಮೋದಿ ನಿಜವಾದ ಕಾರ್ಯಕರ್ತರು: ಪಿಯೂಷ್ ಗೋಯಲ್

Sampriya

ಸೋಮವಾರ, 13 ಏಪ್ರಿಲ್ 2026 (19:01 IST)
Photo Credit X
ಚೆನ್ನೈ: ಕೇಂದ್ರ ಸಚಿವ ಮತ್ತು ತಮಿಳುನಾಡು ಬಿಜೆಪಿ ಚುನಾವಣಾ ಉಸ್ತುವಾರಿ ಪಿಯೂಷ್ ಗೋಯಲ್ ಅವರು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಕೌಶಲ್ಯವನ್ನು ಶ್ಲಾಘಿಸಿದ್ದಾರೆ.

ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುನ್ನ ಎನ್‌ಡಿಎ ಗೆಲುವಿನ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ‘

ಭ್ರಷ್ಟ ಡಿಎಂಕೆ’ಯನ್ನು ಸೋಲಿಸಲು ಪ್ರಧಾನಿಯವರ ಕಾರ್ಯಕ್ರಮ ಪಕ್ಷದ ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯವನ್ನು ಹೆಚ್ಚಿಸಲಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಹೃದಯವಂತರು. ಜನರ ಹೃದಯವನ್ನು ಹೇಗೆ ಗೆಲ್ಲಬೇಕು, ಸಮಾಜದ ವಿವಿಧ ವರ್ಗಗಳನ್ನು ತಲುಪುವುದು ಮತ್ತು ತಮಿಳುನಾಡಿನ ಜನರ ಸೇವೆ ಹೇಗೆ ಮಾಡಬೇಕೆಂಬುದರ ಕುರಿತು ಅವರು ನಮಗೆ ಮಾರ್ಗದರ್ಶನ ನೀಡುತ್ತಾರೆ ಎಂದರು. 

ನಾವು ಒಟ್ಟಾಗಿ ಕುಟುಂಬದಂತೆ ಕೆಲಸ ಮಾಡುತ್ತಿರುವುದರಿಂದ ಈ ಚುನಾವಣೆಯಲ್ಲಿ ಎನ್‌ಡಿಎ ಗೆಲ್ಲಲಿದೆ ಎಂದು ಅವರು ಹೇಳಿದರು. 
ಇದಕ್ಕೂ ಮುನ್ನ ನಡೆದ 'ಮೇರಾ ಬೂತ್ ಸಬ್ಸೆ ಮಜ್ಬೂತ್ ಸಂವಾದ್' ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನ ಪಕ್ಷದ ಬೂತ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ