ಜಮ್ಮು ಕಾಶ್ಮೀರ ನಾಯಕರೊಂದಿಗೆ ಪ್ರಧಾನಿ ಮೋದಿ ಮೀಟಿಂಗ್

ಭಾನುವಾರ, 20 ಜೂನ್ 2021 (09:59 IST)
ನವದೆಹಲಿ: ಆರ್ಟಿಕಲ್ 370 ತೆಗೆದುಹಾಕಿದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಜಮ್ಮು-ಕಾಶ್ಮೀರದ ಪ್ರಮುಖ ನಾಯಕರೊಂದಿಗೆ ಸಭೆ ನಡೆಸಲು ಮುಂದಾಗಿದ್ದಾರೆ. ಜೂನ್ 24 ರಂದು ಈ ಮಹತ್ವದ ಸಭೆ ನಡೆಯಲಿದೆ.


ಜಮ್ಮು-ಕಾಶ್ಮೀರದ ನಾಲ್ವರು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ 14 ರಾಜಕೀಯ ನಾಯಕರನ್ನು ಈ ಮಹತ್ವದ ಸಭೆಗೆ ಆಹ್ವಾನಿಸಲಾಗಿದೆ. ಈ ಸಭೆಗೆ ಹಾಜರಾಗುವವರು ಕೊರೋನಾ ನೆಗೆಟಿವ್ ವರದಿ ಹಾಜರುಪಡಿಸುವುದು ಕಡ್ಡಾಯ.

ಜಮ್ಮು ಕಾಶ್ಮೀರದಲ್ಲಿ ಮತ್ತೆ ಚುನಾವಣೆ ನಡೆಸುವುದು, ರಾಜಕೀಯ ಚಟುವಟಿಕೆಗಳ ಪುನಸ್ಥಾಪನೆ ಕುರಿತಾಗಿ ಈ ಸಭೆಯಲ್ಲಿ ಚರ್ಚೆಯಾಗುವ ಸಾಧ‍್ಯತೆಯಿದೆ. ಈ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಕೂಡಾ ಪಾಲ್ಗೊಳ್ಳಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ