ನೋಟು ನಿಷೇಧದ ರೂವಾರಿಗೆ ಮಹತ್ವದ ಹುದ್ದೆ ನೀಡಿದ ಪ್ರಧಾನಿ ಮೋದಿ

ಬುಧವಾರ, 8 ನವೆಂಬರ್ 2017 (08:15 IST)
ನವದೆಹಲಿ: ಪ್ರಧಾನಿ ಮೋದಿಯವರು 500 ಮತ್ತು 1000 ರೂ.ಗಳ ನೋಟು ಅಮಾನ್ಯಗೊಳಿಸಿ ಇಂದಿಗೆ ಒಂದು ವರ್ಷ. ಈ ನೋಟು ನಿಷೇಧದಂತಹ ಮಹತ್ವದ ನಿರ್ಧಾರಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಧಿಕಾರಿಗೆ ಪ್ರಧಾನಿ ಮೋದಿ ಮಹತ್ವದ ಹುದ್ದೆ ನೀಡಿ ಗೌರವಿಸಿದೆ.


ನೋಟು ನಿಷೇಧ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿಯವರ ವಿಶ್ವಾಸಾರ್ಹ ಅಧಿಕಾರಿ ಹಸನ್ಮುಖ್ ಅಧಿಯಾ ಎಂಬ ಐಎಎಸ್ ಅಧಿಕಾರಿಗೆ ಮೋದಿ ಸರ್ಕಾರ ವಿತ್ತ ಸಚಿವಾಲಯದ ಅತ್ಯಂತ ಹಿರಿಯ ಕಾರ್ಯದರ್ಶಿಯಾಗಿ ಬಡ್ತಿ ನೀಡಿದೆ.

1981 ರ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿರುವ ಹಸನ್ಮುಖ್ ಮೋದಿ ಸರ್ಕಾರ ನೋಟು ನಿಷೇಧ ಕ್ರಮ ಜಾರಿಗೆ ತರಲು ಗೌಪ್ಯವಾಗಿ ನೇಮಿಸಿದ್ದ 6 ಜನರ ತಂಡದಲ್ಲಿ ಒಬ್ಬರಾಗಿದ್ದರು. ನೋಟು ನಿಷೇಧ ಪ್ರಕ್ರಿಯೆ ಜಾರಿಗೆ ತಂದು ವರ್ಷ ತುಂಬುತ್ತಿರುವ ಬೆನ್ನಲ್ಲೇ ಹಿರಿಯ ಅಧಿಕಾರಿಗೆ ಬಡ್ತಿ ನೀಡಿರುವುದು ವಿಶೇಷ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ