ಸರತಿ ಸಾಲಲ್ಲಿ ನಿಂತು ಹಣ ಪಡೆದ ಪ್ರಧಾನಿ ತಾಯಿ

ಮಂಗಳವಾರ, 15 ನವೆಂಬರ್ 2016 (12:20 IST)
ತಮ್ಮ ಮಗನ ಕನಸಿನ ಯೋಜನೆಗೆ ಪ್ರಧಾನಿ ಮೋದಿ ತಾಯಿ ಕೂಡ ಸಾಥ್ ನೀಡಿದ್ದು ಸರತಿ ಸಾಲಲ್ಲಿ ನಿಂತು ಜನಸಾಮಾನ್ಯರಿಗೆ ಮಾದರಿಯಾಗಿದ್ದಾರೆ. 
ತಮ್ಮ ಕಿರಿಯ ಮಗನ ನೆರವಿನಲ್ಲಿ ಗಾಂಧಿನಗರದ ಬ್ಯಾಂಕ್‌ ಒಂದಕ್ಕೆ ಭೇಟಿ ನೀಡಿದ 94ರ ವಯೋವೃದ್ಧೆ ಹೀರಾಬೆನ್ ತಮ್ಮ ಹಳೆ ನೋಟನ್ನು ಕೊಟ್ಟು ಹೊಸ 2000 ರೂಪಾಯಿ ನೋಟನ್ನು ಪಡೆದುಕೊಂಡರು. ವಯೋವೃದ್ಧರಿಗೆ ಪ್ರತ್ಯೇಕ ಕ್ಯೂ ಮಾಡಿದ್ದರೂ ಸಾಮಾನ್ಯರು ನಿಂತಿದ್ದ ಸಾಲಲ್ಲಿ ನಿಂತುಕೊಂಡೇ ಹೀರಾಬೆನ್ ಹಣವನ್ನು ಪಡೆದುಕೊಂಡರು
 
ಈ ಮೂಲಕ ತಮ್ಮ ಮಗನ ದೂರದೃಷ್ಟಿಯ ಯೋಜನೆಗೆ ತಮ್ಮ ಆಶೀರ್ವಾದವಿದೆ ಎಂಬುದನ್ನು ಹೀರಾಬೆನ್ ಸ್ಪಷ್ಟಪಡಿಸಿದ್ದಾರೆ.

ಅವರ ಈ ನಡೆ ಬದಲಾವಣೆಗೆ ಮುಕ್ತವಾಗಬೇಕು ಎಂಬ ಸಂದೇಶವನ್ನು ದೇಶದ ಜನರಿಗೆ ನೀಡಿದೆ.
 
ಹೀರಾಬೆನ್ ಮೋದಿ ಅವರ ಕಿರಿಯ ಸಹೋದರ ಪಂಕಜ್ ಅವರ ಜತೆ ಗುಜರಾತ್ ರಾಜಧಾನಿ ಗಾಂಧಿನಗರದಲ್ಲಿರುತ್ತಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ