ಸಂಸತ್ತಿನಲ್ಲಿ ಪ್ರಧಾನಿ ಮೋದಿ ಅಬ್ಬರದ ಭಾಷಣ! ಮೋದಿ ರೋಷಾವೇಷ!

ಬುಧವಾರ, 7 ಫೆಬ್ರವರಿ 2018 (12:53 IST)
ನವದೆಹಲಿ: ಸಂಸತ್ತಿನಲ್ಲಿ ಇಂದು ಪ್ರಧಾನಿ ಮೋದಿ ಅಬ್ಬರದ ಭಾಷಣ ಮಾಡಿದ್ದಾರೆ. ಕರ್ನಾಟಕ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ತಮ್ಮ ಭಾಷಣದುದ್ದಕ್ಕೂ ಛಾಟಿ ಬೀಸಿದ್ದಾರೆ.
 

1947 ಅಗಸ್ಟ್ 15 ರಂದು ಭಾರತ ಹುಟ್ಟಿಕೊಂಡಿತೆಂದು ಕಾಂಗ್ರೆಸ್ ಹೇಳುತ್ತಿದೆ.  ನೆಹರು ಪ್ರಜಾಪ್ರಭುತ್ವ ಪರಿಚಯಿಸಿದರಂತೆ. ಅಸಲಿಗೆ ಬೌದ್ಧರ ಕಾಲದಲ್ಲೇ ಪ್ರಜಾಪ್ರಭತ್ವದ ಕಲ್ಪನೆಯಿತ್ತು.

ಕಾಂಗ್ರೆಸ್ ನ ಪಾಪಗಳಿಗೆ ಇಡೀ ಜನತೆ ತೆರಿಗೆ ಕಟ್ಟುತ್ತಿದ್ದಾರೆ.  ನ್ಯಾಯಾಧೀಶರ ನೇಮಕದಲ್ಲೂ ಕಾಂಗ್ರೆಸ್ ಹಸ್ತಕ್ಷೇಪ ಮಾಡುತ್ತಿದೆ. ಕಾಂಗ್ರೆಸ್ ಗೆ ದೇಶಕ್ಕಿಂತ ಕುಟುಂಬವೇ ಮೊದಲು.

ದಲಿತ ಮುಖ್ಯಮಂತ್ರಿಯನ್ನು ರಾಜೀವ್ ಗಾಂಧಿ ಅವಮಾನಿಸಿದರು. ಇದರಿಂದಾಗಿಯೇ ಆಂಧ್ರದಲ್ಲಿ ಟಿಡಿಪಿ ಹುಟ್ಟಿಕೊಂಡಿತು. ಕರ್ನಾಟಕ ಚುನಾವಣೆಯಲ್ಲಿ ಖರ್ಗೆ ಭವಿಷ್ಯ ನಿರ್ಧಾರವಾಗಲಿದೆ. ದೇಶದ ಜನರ ಜತೆಗೆ ಚೆನ್ನಾಗಿಯೇ ಆಟವಾಡಿದ್ದೀರಾ. ಕರ್ನಾಟಕ ಸಿಎಂ ಸಿದ್ದರಾಮಯ್ಯ ಸುಳ್ಳನ್ನೇ ಹೇಳ್ತಾರೆ’ ಹೀಗಂತ ಪ್ರಧಾನಿ ವಾಗ್ದಾಳಿ ನಡೆಸುತ್ತಿದ್ದರೆ, ವಿಪಕ್ಷ ಕಾಂಗ್ರೆಸ್ ಸದಸ್ಯರು ಘೋಷಣೆಗಳನ್ನು ಕೂಗಿ ತೀವ್ರವಾಗಿ ಭಾಷಣಕ್ಕೆ ಅಡ್ಡಿಪಡಿಸಿದರು.

ಹಾಗಿದ್ದರೂ ಭಾಷಣ ನಿಲ್ಲಿಸದ ಪ್ರಧಾನಿ ‘ನನ್ನ ಧ್ವನಿಯನ್ನು ಯಾರೂ ಅಡಗಿಸಲಾಗದು’ ಎಂದು ಗದ್ದಲದ ನಡುವೆಯೇ ಭಾಷಣ ಮುಂದುವರಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ