ಅನಾರೋಗ್ಯಕ್ಕೊಳಗಾದ ಅರುಣ್ ಜೇಟ್ಲಿ ಸಹಾಯಕ್ಕೆ ಬಂದ ಪ್ರಧಾನಿ ಮೋದಿ

ಮಂಗಳವಾರ, 10 ಏಪ್ರಿಲ್ 2018 (10:52 IST)
ನವದೆಹಲಿ: ಕಿಡ್ನಿ ಸಮಸ್ಯೆಯಿಂದಾಗಿ ಸದ್ಯಕ್ಕೆ ವಿಶ್ರಾಂತಿಯಲ್ಲಿರುವ ವಿತ್ತ ಸಚಿವ ಅರುಣ್ ಜೇಟ್ಲಿ ಆರೋಗ್ಯ ಸ್ಥಿತಿ ಸುಧಾರಿಸುವವರೆಗೆ ಅವರ ಖಾತೆಯನ್ನು ಪ್ರಧಾನಿ ಮೋದಿಯೇ ನಿಭಾಯಿಸಲಿದ್ದಾರೆ.

ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೊಳಗಾಗಬೇಕಿರುವ ಜೇಟ್ಲಿ ಆರೋಗ್ಯ ಸ್ಥಿತಿ ಸುಧಾರಿಸುವವರೆಗೆ ಅವರ ಕೆಲಸ ಕಾರ್ಯಗಳನ್ನು ತಾವೇ ಮಾಡುವ ಮೂಲಕ ಪ್ರಧಾನಿ ಮೋದಿ ಸ್ನೇಹಿತನ ಸಹಾಯಕ್ಕೆ ನಿಲ್ಲಲಿದ್ದಾರೆ.

ಡಯಾಲಿಸಿಸ್ ಚಿಕಿತ್ಸೆಗಾಗಿ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಅರುಣ್ ಜೇಟ್ಲಿ ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಕೆಲವೇ ದಿನಗಳಲ್ಲಿ ಅವರಿಗೆ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ನಡೆಯಲಿದೆ ಎನ್ನಲಾಗಿದೆ. ಅಲ್ಲಿಯವರೆಗೆ ಅವರು ವಿಶ್ರಾಂತಿಯಲ್ಲಿರಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ