ಇಂದಿನಿಂದ ಪ್ರಧಾನಿ ಮೋದಿ ಅಮೆರಿಕಾ ಟೂರ್ ಶುರು

Krishnaveni K

ಶನಿವಾರ, 21 ಸೆಪ್ಟಂಬರ್ 2024 (10:13 IST)
ನವದೆಹಲಿ: ಇಂದಿನಿಂದ ಪ್ರಧಾನಿ ಮೋದಿ ಮೂರು ದಿನಗಳ ಅಮೆರಿಕಾ ಪ್ರವಾಸ ಆರಂಭಿಸಲಿದ್ದಾರೆ. ಈ ಪ್ರವಾಸದಲ್ಲಿ ಅವರು ಕೆಲವು ಮಹತ್ವದ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.

ಇಂದು ಸಂಜೆ ಅಮೆರಿಕಾ ತಲುಪಲಿರುವ ಪ್ರಧಾನಿ ಮೋದಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಜೊತೆ ಮಾತುಕತೆ, ಭಾರತೀಯ ಮೂಲವಾಸಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಮೋದಿ ಮೂರನೇ ಬಾರಿ ಪ್ರಧಾನಿಯಾದ ಬಳಿಕ ಮೊದಲ ಮತ್ತು ಒಟ್ಟಾರೆಯಾಗಿ ಇದು 9 ನೇ ಬಾರಿಗೆ ಅಮೆರಿಕಾ ಪ್ರವಾಸ ಮಾಡುತ್ತಿದ್ದಾರೆ.

ಜೋ ಬೈಡನ್ ಭೇಟಿ ವೇಳೆ ಇಂಡೋ ಫೆಸಿಪಿಕ್ ಪ್ರದೇಶದಲ್ಲಿನ ಸ್ಥಿರತೆ, ಕ್ವಾಡ್ ರಾಷ್ಟ್ರಗಳೊಂದಿಗಿನ ದ್ವಿಪಕ್ಷೀಯ ಸಂಬಂಧ, ಉಕ್ರೇನ್ ಯುದ್ಧ, ಗಾಜಾ ಬಿಕ್ಕಟ್ಟು ಮುಂತಾದ ಮಹತ್ವದ ವಿಚಾರವಾಗಿ ಮಾತುಕತೆ ನಡೆಯುವ ನಿರೀಕ್ಷೆಯಿದೆ. ಜಾಗತಿಕ ಸಮಸ್ಯೆಗಳ ಕುರಿತು ಉಭಯ ನಾಯಕರು ಮಾತುಕತೆ ನಡೆಸಲಿದ್ದಾರೆ.

ಅಮೆರಿಕಾದಲ್ಲಿ ಈಗ ಅಧ್ಯಕ್ಷೀಯ ಚುನಾವಣೆ ರಂಗೇರಿದ್ದು, ಈ ಭೇಟಿ ವೇಳೆ ಮೋದಿ ತಮ್ಮ ಸ್ನೇಹಿತ, ಅಧ್ಯಕ್ಷ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ರನ್ನು ಭೇಟಿಯಾದರೂ ಅಚ್ಚರಿಯಿಲ್ಲ. ಈಗಿನ ಕಾರ್ಯಕ್ರಮ ಪಟ್ಟಿ ಪ್ರಕಾರ ಈ ಬಗ್ಗೆ ಪ್ರಸ್ತಾಪವಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ