ನೋಟು ನಿಷೇಧ ಕೋಲಾಹಲ: ಸಚಿವರೊಂದಿಗೆ ಸಭೆ ನಡೆಸಿದ ಪ್ರಧಾನಿ ಮೋದಿ

ಸೋಮವಾರ, 28 ನವೆಂಬರ್ 2016 (11:58 IST)
ಚಳಿಗಾಲದ ಸಂಸತ್ತಿನ ಅಧಿವೇಶನದಲ್ಲಿ ನೋಟ್ ಬ್ಯಾನ್ ಕುರಿತಂತೆ ವಿಪಕ್ಷಗಳು ನಡೆಸುತ್ತಿರುವ ಪ್ರತಿಭಟನೆಯಿಂದಾಗಿ ಕಲಾಪ ಸ್ಥಗಿತಗೊಂಡಿದ್ದರಿಂದ, ಪ್ರಧಾನಿ ಮೋದಿ ಇಂದು ಹಿರಿಯ ಸಚಿವರೊಂದಿಗೆ ಚರ್ಚೆ ನಡೆಸಿದ್ದಾರೆ.  
 
ಸಂಸತ್ತಿನಲ್ಲಿ ನೋಟು ನಿಷೇಧ ಕುರಿತಂತೆ ವಿಪಕ್ಷಗಳನ್ನು ಹಣಿಯಲು ಯಾವ ವಿಧಾನಗಳನ್ನು ಅನುಸರಿಸಬೇಕು ಎನ್ನುವ ಬಗ್ಗೆ ಮೋದಿ ಸರಕಾರ ರಣತಂತ್ರ ರೂಪಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
 
ಇಂದು ಬೆಳಿಗ್ಗೆ ವಿಪಕ್ಷಗಳು ಸಂಸತ್ತಿನಲ್ಲಿ ನೋಟ್ ಬ್ಯಾನ್ ಕುರಿತಂತೆ ಸರಕಾರವನ್ನು ಯಾವ ಯಾವ ರೀತಿ ತರಾಟೆಗೆ ತೆಗೆದುಕೊಳ್ಳಬಹುದು ಎಂದು ಚರ್ಚೆ ನಡೆಸಿವೆ.
 
ಸುದ್ದಿಗಾರರೊಂದಿಗೆ ಮಾತನಾಡಿದ ಸಮಾಜವಾದಿ ಪಕ್ಷದ ಸಂಸದ ನರೇಶ್ ಅಗರ್ವಾಲ್, ನೋಟು ನಿಷೇಧ ಕುರಿತಂತೆ ವಿಪಕ್ಷಗಳು ಒಂದಾಗಿವೆ. ಬಿಹಾರ್ ಸಿಎಂ ನಿತೀಶ್ ಕುಮಾರ್ ಮಾತ್ರ ನೋಟು ಬ್ಯಾನ್ ಕುರಿತಂತೆ ದಂದ್ವ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು. 
 
ನೋಟು ನಿಷೇಧ ಕುರಿತಂತೆ ಸಂಸತ್ತಿನ ಅಧಿವೇಶನದ ಆರಂಭದಿಂದಲೂ ಉಭಯ ಸದನಗಳಲ್ಲಿ ಕೋಲಾಹಲ ಸೃಷ್ಟಿಯಾಗಿದೆ. 
 
ಪ್ರಧಾನಮಂತ್ರಿ ನರೇಂದ್ರ ಮೋದಿ ಖುದ್ದಾಗಿ ನೋಟು ನಿಷೇಧ ಕುರಿತಂತೆ ಉತ್ತರಿಸಬೇಕು ಎಂದು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಪಟ್ಟು ಹಿಡಿದಿವೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ