ಮಾನಭಂಗಕ್ಕೊಳಗಾದ ಮಹಿಳೆ ದೂರು ನೀಡಲು ಹೋದಾಗ ಸಬ್ ಇನ್ಸ್ ಫೆಕ್ಟರ್ ಹೀಗಾ ಮಾಡೋದು?
ಶನಿವಾರ, 26 ಡಿಸೆಂಬರ್ 2020 (07:05 IST)
ಶಹಜಹಾನ್ಪುರ : ಸಾಮೂಹಿಕ ಮಾನಭಂಗಕ್ಕೆ ಒಳಗಾದ ಸಂತ್ರಸ್ತೆ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಠಾಣೆಯಲ್ಲಿದ್ದ ಪೊಲೀಸ್ ಸಬ್ ಇನ್ಸ್ ಫೆಕ್ಟರ್ ಮಾನಭಂಗ ಎಸಗಿದ ಘಟನೆ ಜಲಾಲಾಬಾದ್ ನಲ್ಲಿ ನಡೆದಿದೆ.
35 ವರ್ಷದ ಮಹಿಳೆ ನಡೆದುಕೊಂಡು ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ಐವರು ಪುರುಷರು ಆಕೆಯನ್ನು ಎಳೆದೊಯ್ದು ಹತ್ತಿರದ ಮೈದಾನದಲ್ಲಿ ಮಾನಭಂಗ ಎಸಗಿದ್ದಾರೆ. ಈ ಬಗ್ಗೆ ಸಂತ್ರಸ್ತೆ ಜಲಾಲಾಬಾದ್ ಪೊಲೀಸ್ ಠಾಣೆಗೆ ದೂರು ನೀಡಲು ಬಂದಾಗ ಪೊಲೀಸ್ ಸಬ್ ಇನ್ಸ್ ಫೆಕ್ಟರ್ ಕೋಣೆಗೆ ಎಳೆದುಕೊಂಡು ಹೋಗಿ ಮಾನಭಂಗ ಎಸಗಿದ್ದಾನೆ.
ಈ ಬಗ್ಗೆ ದೂರು ದಾಖಲಾಗದ ಹಿನ್ನಲೆಯಲ್ಲಿ ಮಹಿಳೆ ಮಾಧ್ಯಮದವರ ಸಹಕಾರ ಪಡೆದು ಈ ಬಗ್ಗೆ ಪ್ರಕರಣ ದಾಖಲಿಸಿದ್ದಾಳೆ. ಪೊಲೀಸರು ತನಿಖೆ ನಡೆಸಿ ಆರೋಪಿ ಇನ್ಸ್ ಫೆಕ್ಟರ್ ಸೇರಿ ಉಳಿದ ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದ್ದಾರೆ.