ರಾಜಕೀಯ ಪಕ್ಷಗಳಿಗೆ ಬಿಗ್ ಶಾಕ್: ಇನ್ಮುಂದೆ ಕದ್ದು ದೇಣಿಗೆ ಪಡೆಯುವಂತಿಲ್ಲ

ಬುಧವಾರ, 1 ಫೆಬ್ರವರಿ 2017 (14:45 IST)
ರಹಸ್ಯವಾಗಿ ಕೋಟಿ ಕೋಟಿ ಹಣವನ್ನು ದೇಣಿಗೆಯಾಗಿ ಪಡೆಯುವ ರಾಜಕೀಯ ಪಕ್ಷಗಳಿಗೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಶಾಕ್ ಮೂಡಿಸಿದ್ದಾರೆ.
 
ಕೇಂದ್ರ ಸರ್ಕಾರ 2017-18 ನೇ ಸಾಲಿನ ಬಜೆಟ್‌ನಲ್ಲಿ ರಾಜಕೀಯ ಪಕ್ಷಗಳಿಗೆ ನಗದು ರೂಪದಲ್ಲಿ ನೀಡುವ ದೇಣಿಗೆಯ ಗರಿಷ್ಠ ಮೊತ್ತವನ್ನು 20 ಸಾವಿರದಿಂದ 2 ಸಾವಿರಕ್ಕೆ ಇಳಿಸಿ ಕಪ್ಪು ಹಣ ತಡೆಗೆ ರಾಮಬಾಣ ಬೀಸಿದ್ದಾರೆ.
 
ರಾಜಕೀಯ ಪಕ್ಷಗಳು ಪಡೆಯುವ ದೇಣಿಗೆಗೆ ಇಲ್ಲಿಯವರೆಗೆ ಅಂಕುಶ ಹಾಕಲು ಸಾಧ್ಯವಾಗಿರಲಿಲ್ಲ. ಇದೀಗ ಓರ್ವ ವ್ಯಕ್ತಿಯಿಂದ  ನಗದು ರೂಪದಲ್ಲಿ ಪಡೆಯಬಹುದಾಗಿದ್ದ ಗರಿಷ್ಠ ದೇಣಿಗೆ ಮೊತ್ತವನ್ನು 20 ಸಾವಿರದಿಂದ 2 ಸಾವಿರಕ್ಕೆ ಇಳಿಕೆ ಮಾಡಿ ರಹಸ್ಯ ದೇಣಿಗೆಗೆ ಕಡಿವಾಣ ಹಾಕಿದ್ದಾರೆ.
 
2000 ರೂಪಾಯಗಳಿಗಿಂತ ಹೆಚ್ಚಿನ ಮೊತ್ತವನ್ನು ರಾಜಕೀಯ ಪಕ್ಷಗಳು ದೇಣಿಗೆ ಪಡೆಯಬೇಕಾದಲ್ಲಿ ಚೆಕ್ ಮುಖಾಂತರ , ಡಿಜಿಟಲ್ ಪಾವತಿ ಮುಖಾಂತರ ದೇಣಿಗೆ ಪಡೆಯಬಹುದಾಗಿದೆ. ಇದರಿಂದ ಕಪ್ಪು ಹಣ ದೇಣಿಗೆ ಸಂಗ್ರಹಿಸುವ ರಾಜಕೀಯ ಪಕ್ಷಗಳಿಗೆ ಶಾಕ್ ನೀಡಿದಂತಾಗಿದೆ.
 
 ದೇಣಿಗೆ ನೀಡುವವರ ಬಗ್ಗೆ ಮಾಹಿತಿ ನೀಡುವುದು ಕಡ್ಡಾಯಗೊಳಿಸಿರುವುದು ದೇಣಿಗೆ ಪಾವತಿಯನ್ನು ಚೆಕ್, ಡಿಜಿಟಲ್ ಪಾವತಿ ಗೊಳಿಸಿರುವ ಸಚಿವ ಅರುಣ್ ಜೇಟ್ಲಿ ಕ್ರಮ ಶ್ಲಾಘನೆಗೊಳಗಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ