ಅಧಿಕಾರದ ಮದ: ಪೊಲೀಸ್‌ಗೆ ಶಾಸಕನಿಂದ ಕಪಾಳಮೋಕ್ಷ

ಗುರುವಾರ, 18 ಆಗಸ್ಟ್ 2016 (15:11 IST)
ಅಧಿಕಾರದ ಮದವೇರಿರುವ ರಾಜಕಾರಣಿಗಳ ಅಟ್ಟಹಾಸವನ್ನು ನಿರೂಪಿಸುವ ಘಟನೆಗಳು ಇತ್ತೀಚಿಗಂತೂ ದಿನೇ-ಪ್ರತಿದಿನ ವರದಿಯಾಗುತ್ತಿವೆ. ಎನ್‌ಸಿಪಿ ಶಾಸಕರೊಬ್ಬರು ಡೆಪ್ಯುಟಿ ಕಲೆಕ್ಟರ್ ಒಬ್ಬರಿಗೆ ಕಪಾಳಮೋಕ್ಷ ಮಾಡಿದ ಘಟನೆ ಬೆನ್ನ ಹಿಂದೆಯೇ ಅದೇ ಮಹಾರಾಷ್ಟ್ರದಲ್ಲಿ ಬಿಜೆಪಿ ಶಾಸಕರೊಬ್ಬರು ಪೊಲೀಸ್ ಪೇದೆಯೋರ್ವರಿಗೆ ಕಪಾಳಮೋಕ್ಷ ಮಾಡಿದ ಖಂಡನೀಯ ಘಟನೆ ನಡೆದಿದೆ. 
 
ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಬಿಜೆಪಿ ಶಾಸಕ ರಾಮಚಂದ್ರ ಪುನಜ್ ಅವ್ಸಾರೆ ಪೊಲೀಸ್ ಪೇದೆಯೋರ್ವರಿಗೆ ಕಪಾಳಮೋಕ್ಷ ಮಾಡುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. 
 
ಶಾಸಕ ಪೊಲೀಸ್ ಠಾಣೆ ಕಡೆ ನಡೆದುಕೊಂಡು ಹೋಗಿ ಪೊಲೀಸ್ ಪೇದೆ ಕೆನ್ನೆಗೆ ಬಾರಿಸುತ್ತಿರುವ ದೃಶ್ಯಗಳೆಲ್ಲವೂ ಈ ವಿಡಿಯೋದಲ್ಲಿದೆ. 
 
ಆ ಸಮಯದಲ್ಲಿ ಅಲ್ಲಿಯೇ ಬಿದ್ದ ಪೊಲೀಸ್ ಅಧಿಕಾರಿಯೊಬ್ಬರು ಶಾಸಕನನ್ನು ತಡೆಯಲು ಪ್ರಯತ್ನಿಸಿದರಾದರೂ ಅವರ ಕೋಪ ಶಮನವಾಗಲೇ ಇಲ್ಲ. 
 
ಅವರ ಈ ವರ್ತನೆಗೆ ಕಾರಣವೇನೆಂಬುದು ಇನ್ನು ತಿಳಿದು ಬಂದಿಲ್ಲ.
 
ಬಾಂದ್ರಾ ವಿಧಾಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಅವ್ಸಾರೆ ಈ ಮೊದಲು ಶಿವಸೇನಾದಲ್ಲಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ .

ವೆಬ್ದುನಿಯಾವನ್ನು ಓದಿ