ಅವರ ಮೃತದೇಹವನ್ನು ಗಾಂಧಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಶವಪರೀಕ್ಷೆ ನಂತರವೇ ಸಾವಿನ ಕಾರಣ ತಿಳಿದುಬರಲಿದೆ. ಪ್ರಭಾಕರ ರಾವ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಬೇರಾವುದೇ ರೀತಿಯಲ್ಲಿ ಸಾವನ್ನಪ್ಪಿದ್ದಾರೆಯೇ ಎನ್ನುವುದು ಶವ ಪರೀಕ್ಷೆ ನಂತರವೇ ತಿಳಿದುಬರಲಿದೆ.ಪೊಲೀಸರು ಅನುಮಾನಾಸ್ಪದ ಸಾವನ್ನು ದಾಖಲು ಮಾಡಿಕೊಂಡಿದ್ದಾರೆ.
ಪ್ರಭಾಕರ ರಾವ್ ಬೇಲ್ ಡೀಲ್ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿಗೂ ಹೋಗಿ ಬಂದಿದ್ದರು. ಬಳ್ಳಾರಿ ಗಣಿ ಹಗರಣಗಳಲ್ಲಿ ಆರೋಪ ಹೊತ್ತಿದ್ದ ಜನಾರ್ದನ ರೆಡ್ಡಿ ಅವರಿಗೆ ಬೇಲ್ ಡೀಲ್ ಮಾಡಲು ಯತ್ನಿಸಿ ಜೈಲು ಸೇರಿದ್ದ ಪ್ರಭಾಕರ ರಾವ್ ಜಾಮೀನಿನ ಮೇಲೆ ಹೊರಬಂದಿದ್ದರು. ನನ್ನ ವಿರುದ್ದ ಷಡ್ಯಂತ್ರ ನಡೆಸಲಾಗಿದ್ದು, ಉದ್ದೇಶಪೂರ್ವಕವಾಗಿ ಈ ಕೇಸ್‌ನಲ್ಲಿ ಸಿಕ್ಕಿಸಲಾಗಿದೆ ಎಂದು ಪ್ರಭಾಕರ ರಾವ್ ಆರೋಪಿಸಿದ್ದರು.