ಅತ್ಯಾಚಾರ ಸಂತ್ರಸ್ತ ಗರ್ಭಿಣಿಯನ್ನು ಜೀವಂತ ದಹಿಸಿದ ಆರೋಪಿ
ಮೂರು ತಿಂಗಳ ಹಿಂದೆ ಆರೋಪಿ ಅತ್ಯಾಚಾರವೆಸಗಿದ್ದ. ಆದರೂ ಯುವತಿ ಮಾನಕ್ಕೆ ಅಂಜಿ ಯಾರ ಬಳಿಯೂ ಘಟನೆ ಬಗ್ಗೆ ಬಾಯ್ಬಿಟ್ಟಿರಲಿಲ್ಲ. ಆದರೆ ಆಕೆ ಗರ್ಭಿಣಿ ಎಂದು ತಿಳಿದಾಗ ವಿಚಾರ ಬಯಲಿಗೆ ಬಂದಿತ್ತು.
ಬಳಿಕ ಗ್ರಾಮದ ಮುಖಂಡರು ಆರೋಪಿಯೇ ಯುವತಿಯನ್ನು ಮದುವೆಯಾಗಬೇಕೆಂದು ನ್ಯಾಯ ಪಂಚಾಯ್ತಿ ನಡೆಸಿ ತೀರ್ಪು ನೀಡಿದ್ದರು. ಅದರಂತೆ ಆರೋಪಿ ಯುವತಿಯನ್ನು ಮನೆಗೆ ಕರೆದೊಯ್ದಿದ್ದ. ಆದರೆ ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ. ಈ ಸಂಬಂಧ ಇದೀಗ ಯುವತಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.