ನಿರ್ಗಮಿಸುವ ಮೊದಲು ಪ್ರಧಾನಿ ಮೋದಿ, ಸಚಿವ ಅರುಣ್ ಜೇಟ್ಲಿಯನ್ನು ಹೊಗಳಿದ ಪ್ರಣಬ್ ಮುಖರ್ಜಿ
ಸೋಮವಾರ, 3 ಜುಲೈ 2017 (09:14 IST)
ನವದೆಹಲಿ: ರಾಷ್ಟ್ರಪತಿಯಾಗಿ ಇನ್ನು ಬೆರಳೆಣಿಕೆಯಷ್ಟು ದಿನ ಅಧಿಕಾರದಲ್ಲಿರುವ ಪ್ರಣಬ್ ಮುಖರ್ಜಿ ಇದೀಗ ನಿರ್ಗಮನಕ್ಕೂ ಮುನ್ನ ಪ್ರಧಾನಿ ಮೋದಿ ಮತ್ತು ವಿತ್ತ ಸಚಿವ ಅರುಣ್ ಜೇಟ್ಲಿಗೆ ಹೊಗಳಿಕೆ ನೀಡಿದ್ದಾರೆ.
ಮೊದಲು ಹೊಗಳಿಕೆ ಹಾಕಿದ್ದು ಪ್ರಧಾನಿ ಮೋದಿ. ಬೇರೆ ಪಕ್ಷದವರಾದರೂ ಪ್ರಧಾನಿ ಮತ್ತು ರಾಷ್ಟ್ರಪತಿಗಳು ಪರಸ್ಪರ ಹೊಗಳಿಕೊಂಡಿದ್ದು ವಿಶೇಷ. ‘ತಂದೆಯ ಸ್ಥಾನದಲ್ಲಿದ್ದುಕೊಂಡು ನನಗೆ ಹಿತವಚನ ಹೇಳುತ್ತಿದ್ದರು ಪ್ರಣಬ್ ದಾ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಹೇಳುತ್ತಿದ್ದರು. ಅವರ ಜತೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ಅದೃಷ್ಟ’ ಎಂದು ಮೊದಲು ಪ್ರಧಾನಿ ಮೋದಿ ಹೊಗಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಣಬ್ ‘ಮೂರು ವರ್ಷ ಪರಸ್ಪರ ಸಹಕಾರದಿಂದ ಕೆಲಸ ಮಾಡಿದ್ದೇವೆ. ನಮ್ಮಿಬ್ಬ ಭಿನ್ನಾಬಿಪ್ರಾಯಗಳನ್ನು ಬದಿಗೊತ್ತಿ ಉತ್ತಮ ಸಂಬಂಧ ಕಾಪಾಡಿದ್ದೇವೆ. ಅರುಣ್ ಜೇಟ್ಲಿ ಅವರಿಗಂತೂ ಅದೆಷ್ಟು ತೊಂದರೆ ಕೊಟ್ಟಿದ್ದೇನೋ ಗೊತ್ತಿಲ್ಲ. ನನ್ನ ಬಳಿಗೆ ಏನಾದರೂ ಫೈಲ್ ಬಂದರೆ ಜೇಟ್ಲಿಯವರನ್ನೇ ಕರೆಯುತ್ತಿದ್ದೆ. ಯಾವತ್ತೂ ಬೇಸರಿಸಿಕೊಳ್ಳದೆ ನನ್ನ ಅನುಮಾನಗಳಿಗೆ ಉತ್ತರಿಸುತ್ತಿದ್ದರು’ ಎಂದು ಪ್ರಣಬ್ ಹೊಗಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ