ಭ್ರಷ್ಟಾಚಾರದ ಬಗ್ಗೆ ಪ್ರಧಾನಿ ಮೋದಿ ನನ್ನ ಜೊತೆ ಚರ್ಚಿಸಲಿ- ರಾಹುಲ್ ಗಾಂಧಿ ಸವಾಲು

ಶನಿವಾರ, 4 ಮೇ 2019 (12:26 IST)
ನವದೆಹಲಿ : ಭ್ರಷ್ಟಾಚಾರದ ಬಗ್ಗೆ ನನ್ನ ಜೊತೆ ಮೋದಿ 5ರಿಂದ 10 ನಿಮಿಷ ಚರ್ಚೆಗೆ ಬರಲಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿಗೆ ಸವಾಲೆಸೆದಿದ್ದಾರೆ.




ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಹುಲ್ ಗಾಂಧಿ, ರಫೇಲ್ ಡೀಲ್ ನಲ್ಲಿ 30 ಸಾವಿರ ಕೋಟಿ ಲೂಟಿಯಾಗಿದೆ. ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ನನ್ನ ಹೇಳಿಕೆಯ ಬಗ್ಗೆ ಕೋರ್ಟ್ ನಲ್ಲಿ ಕ್ಷಮೆಯಾಚಿಸಿದ್ದೇನೆ, ಆದರೆ ನಾನು ಈಗಲೂ ಹೇಳುವೆ ಚೌಕಿದಾರ್ ಚೋರ್ ಹೈ ಎಂದು ಹೇಳಿದ್ದಾರೆ.


ಚುನಾವಣಾ ಆಯೋಗದ ವಿರುದ್ಧವೂ ಕಿಡಿಕಾರಿದ ರಾಹುಲ್ ಗಾಂಧಿ ಅವರು, ಕೇಂದ್ರ ಚುನಾವಣಾ ಆಯೋಗ ಪಕ್ಷಪಾತ ಧೋರಣೆಯನ್ನು ಹೊಂದಿದೆ. ಆಡಳಿತ, ವಿಪಕ್ಷಗಳ ಪರ ಆಯೋಗದಿಂದ ಪಕ್ಷಪಾತವಾಗಿದೆ. ಸಾಂವಿಧಾನಿಕ ಸಂಸ್ಥೆ ತನ್ನ ಜವಬ್ದಾರಿ ನಿರ್ವಹಿಸಲಿ ಎಂದು ಅಸಮಾಧಾನ ಹೋರಹಾಕಿದ್ದಾರೆ.  


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ