ಉತ್ತರಪ್ರದೇಶದ ಸಾರಥ್ಯ ವಹಿಸಲು ಪ್ರಿಯಾಂಕಾ ರೆಡಿ?

ಮಂಗಳವಾರ, 5 ಜುಲೈ 2016 (10:44 IST)
ರಾಜ್ಯದಲ್ಲಿ ಕಳೆದುಕೊಂಡಿರುವ ಅಧಿಕಾರವನ್ನು ಮರಳಿಗಳಿಸಲು ಪ್ರಿಯಾಂಕಾ ಗಾಂಧಿ ಅವರ ಸಾರಥ್ಯ ಬೇಕು ಎಂಬ ಕಾಂಗ್ರೆಸ್ ಕಾರ್ಯಕರ್ತರ, ಹಲವು ನಾಯಕರ ಬಯಕೆ, ಒತ್ತಾಯ ಈಡೇರುವಂತಿದೆ. ಉತ್ತರ ಪ್ರದೇಶದಲ್ಲಿ ಸ್ಟಾರ್ ಪ್ರಚಾರಕಿ ಪಾತ್ರವನ್ನು ನಿರ್ವಹಿಸಲು ಪ್ರಿಯಾಂಕಾ ಒಪ್ಪಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. 
 
ಇಲ್ಲಿಯವರೆಗೆ ಪ್ರಿಯಾಂಕಾ ಪ್ರಚಾರ ಕಾರ್ಯ ಕೇವಲ ತನ್ನ ತಾಯಿ ಸೋನಿಯಾ ಗಾಂಧಿ ಅವರು ಪ್ರತಿನಿಧಿಸುವ ರಾಯ್ ಬರೇಲಿ ಮತ್ತು ಸಹೋದರ ರಾಜೀವ್ ಗಾಂಧಿ ಅವರ ಕ್ಷೇತ್ರ ಅಮೇಥಿಗೆ ಮಾತ್ರ ಸೀಮಿತವಾಗಿತ್ತು. ಈಗ ತಮ್ಮ ಪಾತ್ರವನ್ನು ವಿಸ್ತರಿಸಲು ಅವರು ಒಪ್ಪಿಕೊಂಡಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
 
ಇತ್ತೀಚಿಗೆ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿ, ಉತ್ತರ ಪ್ರದೇಶ ಉಸ್ತುವಾರಿ ಗುಲಾಂ ನಬಿ ಆಜಾದ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು ಅವರು ಬಹುದಿನಗಳ ಬೇಡಿಕೆಯನ್ನು ಅಂಗೀಕರಿಸಲಿದ್ದಾರೆ ಎಂಬುದಕ್ಕೆ ಪುಷ್ಠಿ ನೀಡಿವೆ. 
 
ಪ್ರಿಯಾಂಕಾ ರಾಜ್ಯಾದ್ಯಂತ ಪ್ರಚಾರ ಕಾರ್ಯ ಕೈಗೊಳ್ಳಲಿದ್ದಾರೆ ಎಂದು ಯುಪಿಯ ಕಾರ್ಯದರ್ಶಿ ಗುಲಾಮ್ ನಬಿ ಆಜಾದ್ ಸಹ ಇತ್ತೀಚಿಗೆ ವಿಶ್ವಾಸವನ್ನು ವ್ಯಕ್ತ ಪಡಿಸಿದ್ದರು. 
 
ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 403 ಸ್ಥಾನಗಳಲ್ಲಿ ಕಾಂಗ್ರೆಸ್ ಕೇವಲ 28ರಲ್ಲಷ್ಟೇ ಗೆಲುವನ್ನು ಸಾಧಿಸಿತ್ತು. ಒಂದು ವೇಳೆ ಪ್ರಿಯಾಂಕಾ ಈ ಬಾರಿ ಸಾರಥ್ಯ ವಹಿಸಿದ್ದೇ ಆದರೆ ಅವರ ಮೋಡಿ ಎಷ್ಟರ ಮಟ್ಟಿಗೆ ಕಾಂಗ್ರೆಸ್ ಪಕ್ಷಕ್ಕೆ ವರದಾನವಾಗಲಿದೆ ಎಂಬುದು ಸಾಬೀತಾಗುತ್ತದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ