ಹಬ್ಬಕ್ಕೆ ತರುತ್ತಿದ್ದ ಒಂಟೆಗಳ ರಕ್ಷಣೆ
ಕೆಲ ದುಷ್ಕರ್ಮಿಗಳು ಬಕ್ರೀದ್ ಹಬ್ಬಕ್ಕೆಂದು 18 ಒಂಟೆಗಳನ್ನು ರಾಜ್ಯಕ್ಕೆ ಅಕ್ರಮವಾಗಿ ಸಾಗಿಸುವ ಪ್ರಯತ್ನದಲ್ಲಿದ್ದರು. ಆದರೆ ಕರ್ನಾಟಕದಲ್ಲಿ ಒಂಟೆಗಳ ಬಲಿ ನಿಷೇಧವಿದ್ದರಿಂದ ಗಡಿ ಭಾಗದಲ್ಲಿ ಪೊಲೀಸರು 24*7ಗಳ ಕಾಲ ಬಿಗಿ ಭದ್ರತೆ ಕೈಗೊಂಡಿದ್ದರು.
ಈ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ತರಲು ಸಾಧ್ಯವಾಗದೇ ಆ 18 ಒಂಟೆಗಳನ್ನು ತಮಿಳುನಾಡಿನ ಹೊಸೂರಿನಲ್ಲಿ ಅಕ್ರಮವಾಗಿ ಇರಿಸಲಾಗಿತ್ತು. ಅವೆಲ್ಲವನ್ನು ನಂತರ ದಿನಗಳಲ್ಲಿ ಅಕ್ರಮವಾಗಿ ಬೆಂಗಳೂರು ಸೇರಿದಂತೆ ಹಲವು ಕಡೆ ಸಾಗಿಸಲು ಹೊಂಚು ಹಾಕಲಾಗಿತ್ತು.
ಅಕ್ರಮವಾಗಿ ಒಂಟೆಗಳ ಸಾಗಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಹೊಸೂರು ನಗರಪಾಲಿಕೆ ಅಧಿಕಾರಿಗಳ ಮತ್ತು ಪೊಲೀಸರು ದಾಳಿ ನಡೆಸಿದ್ದಾರೆ.