ಸಿಧು ಕಾಮಿಡಿ ಶೋನಲ್ಲಿ ಭಾಗವಹಿಸಲು ಗ್ರೀನ್ ಸಿಗ್ನಲ್

ಶುಕ್ರವಾರ, 24 ಮಾರ್ಚ್ 2017 (10:21 IST)
ಪಂಜಾಬ್ ಸಚಿವರಾದ ಬಳಿಕ ನವಜೋತ್ ಸಿಂಗ್ ಸಿಧು ಧರ್ಮ ಸಂಕಟದಲ್ಲಿ ಸಿಲುಕಿದ್ದರು. ಅತ್ತ ಸಚಿವ ಸ್ಥಾನ, ಇತ್ತ ಕಾಮಿಡಿ ಶೋ. ಯಾವುದನ್ನ ಬಿಡೊದು ಯಾವುದನ್ನ ಮುನ್ನಡೆಸುವುದು ಎಂದು ಗೊಂದಲಕ್ಕೆ ಸಿಲುಕಿದ್ದರು. ಇದೀಗ, ಸಿಧು ಕನ್ ಫ್ಯೂಶನ್`ಗೆ ಪರಿಹಾರ ಸಿಕ್ಕಿದೆ.

ಹೌದು, ಪಂಜಾಬ್`ನ ಅಡ್ವೋಕೇಟ್ ಜನರಲ್ ಅತುಲ್ ನಂದಾ ಅವರು ಸಚಿವ ಸಿಧುಗೆ ಗ್ರೀನ್ ಸಿಗ್ನಲ್ ನೀಡಿದ್ದು, ಸಚಿವರಾಗಿ ಕಾಮಿಡಿ ಶೋನಲ್ಲಿ ಭಾಗವಹಿಸುವುದರಿಂದ ಯಾವುದೇ ಹಿತಾಸಕ್ತಿ ಸಂಘರ್ಷ ಏರ್ಪಡುವುದಿಲ್ಲ. ಇದು ಕಾನೂನು ಬಾಹಿರ ಎಂಬ ಕಾನೂನಿನಲ್ಲೂ ಯಾವುದೇ ಉಲ್ಲೇಖವಿಲ್ಲ ಸ್ಪಷ್ಟಪಡಿಸಿದ್ದಾರೆ.

 ಸಿಎಂ ಅಮರೀಂದರ್ ಸಿಂಗ್ ಸಹ ಅಡ್ವೋಕೇಟ್ ಜನರಲ್ ಅವರಿಂದ ವರದಿ ಪಡೆದಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ಸಚಿವ ಸಿಧುಗೆ ನೀಡಿರುವ ಖಾತೆಗಳಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎನ್ನಲಾಗಿದೆ.

ಸಚಿವರಾದ ಬಳಿಕವೂ ಕಾಮಿಡಿ ಶೋನಲ್ಲಿ ಭಾಗವಹಿಸುತ್ತೇನೆ ಎಂದು ಸಿಧು ನೀಡಿದ್ದ ಹೇಳಿಕೆ ಭಾರೀ ವಿವಾದ ಸೃಷ್ಟಿಸಿತ್ತು. ಸ್ವತಃ ಸಿಎಂ ಅಮರೀಂದರ್ ಸಿಂಗ್, ಸಿಧು ಕಾಮಿಡಿ ಶೋನಲ್ಲಿ ಭಾಗವಹಿಸುವುದಾದರೆ ಅವರ ಖಾತೆ ಬದಲಿಸುವುದಾಗಿ ಹೇಳಿದ್ದರು.

ವೆಬ್ದುನಿಯಾವನ್ನು ಓದಿ