ವಿಂಗ್ ಕಮಾಂಡರ್ ಅಭಿನಂದನ್ ಜೈನ್ ರನ್ನು ನಾನೇ ಎದುರುಗೊಳ್ಳುವೆ, ಒಂದೇ ಒಂದು ಚಾನ್ಸ್ ಕೊಡಿ! ಪಂಜಾಬ್ ಸಿಎಂ

ಶುಕ್ರವಾರ, 1 ಮಾರ್ಚ್ 2019 (09:52 IST)
ಅಮೃತಸರ: ಪಾಕ್ ವಶದಲ್ಲಿರುವ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಜೈನ್ ಇಂದು ಬಿಡುಗಡೆಯಾಗಲಿದ್ದು, ಅವರನ್ನು ವಾಘಾ ಗಡಿ ಮೂಲಕ ಕಳುಹಿಸಿಕೊಡುವ ನಿರೀಕ್ಷೆಯಿದೆ.


ಈ ನಡುವೆ ಅಮೃತಸರದಲ್ಲಿರುವ ಪಂಜಾಬ್ ಸಿಎಂ ಕ್ಯಾ. ಅಮರೀಂದರ್ ಸಿಂಗ್ ಅಭಿನಂದನ್ ಜೈನ್ ಅವರನ್ನು ನಾನೇ ಬರಮಾಡಿಕೊಳ್ಳುವೆ. ನನಗೆ ಒಂದು ಅವಕಾಶ ಕೊಡಿ. ಅವರು ನಮ್ಮೆ ಹೆಮ್ಮೆ. ವಾಘಾ ಗಡಿ ಮೂಲಕವೇ ಅವರನ್ನು ಕಳುಹಿಸಿಕೊಡಿ ಎಂದು ಪ್ರಧಾನಿ ಮೋದಿಗೆ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ಪಂಜಾಬ್ ನ ಗಡಿ ರಕ್ಷಣೆಯ ಉಸ್ತುವಾರಿ ಹೊತ್ತಿರುವ ಸಿಎಂ ಅಮರೀಂದರ್ ಸಿಂಗ್ ಈ ರೀತಿ ಪ್ರಧಾನಿಗೆ ಮನವಿ ಮಾಡಿದ್ದು, ಆತನನ್ನು ಎದುರುಗೊಳ್ಳುವುದೇ ನನಗೆ ಹೆಮ್ಮೆ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ