ಅನುಪಮಾ ರಾಜೀನಾಮೆ ತಡೆಹಿಡಿಯಲು ಸಿಎಂ ನಿರ್ದೇಶನ

ಬುಧವಾರ, 8 ಜೂನ್ 2016 (12:56 IST)
ಡಿವೈಎಸ್‌ಪಿ ಅನುಪಮ ಶೆಣೈ ಪರವಾಗಿ ಸಾರ್ವಜನಿಕ ಸಹಾನುಭೂತಿ ವ್ಯಕ್ತವಾಗುತ್ತಿರುವುದರ ನಡುವೆ ಅವರ ರಾಜೀನಾಮೆಯನ್ನು ತಡೆಹಿಡಿಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಜಿ & ಐಜಿಪಿ ಓಂ ಪ್ರಕಾಶ್ ಅವರಿಗೆ ನಿರ್ದೇಶನ ನೀಡಿದ್ದಾರೆ.
 
ಜತೆಗೆ ಅನುಪಮಾ ಅವರದೆನ್ನಲಾದ ಫೇಸ್‌ಬುಕ್‌ನಲ್ಲಿ ಪ್ರಕಟವಾಗುತ್ತಿರುವ ಹೇಳಿಕೆಗಳ ಪರಿಣಾಮ ಪ್ರಚೋದನೆಗೊಳಗಾಗಿ ತರಾತುರಿಯಲ್ಲಿ ಯಾವುದೇ ತೀರ್ಮಾನ ಕೈಗೊಳ್ಳಬೇಡಿ ಎಂದು ಸಿಎಂ ಓಂ ಪ್ರಕಾಶ್ ಅವರಿಗೆ ಸೂಚನೆ ನೀಡಿದ್ದಾರೆ. 
 
ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಸಿಎಂ, ಆ ಹೆಣ್ಣು ಮಗಳು ಇನ್ನೂ ಡಿವೈಎಸ್‌ಪಿ ಆಗಿದ್ದಾರೆ. ಆಕೆ ಹುದ್ದೆಯಲ್ಲಿ ಮುಂದುವರಿಯಬೇಕೆಂದು ಸರ್ಕಾರ ಬಯಸುತ್ತದೆ. ಶೆಣೈ ಮನವೊಲಿಸಲು ಡಿಜಿಪಿ ಓಂ ಪ್ರಕಾಶ್ ಅವರಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ. 
 
ಫೇಸ್ ಬುಕ್ ಪುಟದಲ್ಲಿ ಸರ್ಕಾರದ ವಿರುದ್ಧ ಬರೆಯುತ್ತಿರುವ ಅನುಪಮಾ ಶೆಣೈ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ. 
 
ಕಳೆದ ನಾಲ್ಕ ನಾಲ್ಕು ದಿನಗಳ ಹಿಂದೆ ಏಕಾಏಕಿ ರಾಜೀನಾಮೆ ನೀಡಿ ಕಚೇರಿಯಿಂದ ತೆರಳಿರುವ ಶೆಣೈ ಆ ಬಳಿಕ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಆದರೆ ಅವರದೆನ್ನಲಾದ ಫೇಸ್‌ಬುಕ್‌ನಲ್ಲಿ ಆಡಳಿತದ ವಿರುದ್ಧ ಸಮರವನ್ನೇ ಸಾರಲಾಗಿದೆ. ವಿಶೇಷವಾಗಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಅನುಪಮಾ ಹೆಚ್ಚಿನ ಸ್ಟೇಟಸ್ ಹಾಕಿದ್ದಾರೆ. 
 
ಅನುಪಮಾ ಅವರು ಮಾಡಿರುವ ಆರೋಪಗಳ ವಿರುದ್ಧ ಸಿಎಂ ಪರಮೇಶ್ವರ ನಾಯ್ಕ್ ಅವರ ಬಳಿ ಸ್ಪಷ್ಟನೆ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ