ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಫೈನಲ್ ಪ್ರವೇಶಿಸಿದ ಪಿ.ವಿ.ಸಿಂಧು

ಗುರುವಾರ, 18 ಆಗಸ್ಟ್ 2016 (21:36 IST)
ರಿಯೋ ಒಲಿಂಪಿಕ್ಸ್ ಪಂದ್ಯಾವಳಿಯ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಹೆಮ್ಮೆಯ ಪುತ್ರಿ ಪಿ.ವಿ.ಸಿಂಧು ತಮ್ಮ ಎದುರಾಳಿ ಜಪಾನಿನ ಒಕುಹರಾ ವಿರುದ್ಧ ಜಯಗಳಿಸಿ ಫೈನಲ್ ತಲುಪಿದ್ದಾರೆ.
 
ಸೆಮಿಫೈನಲ್‌ನಲ್ಲಿ ಭರ್ಜರಿ ಆಟ ಪ್ರದರ್ಶಿಸಿದ ಪಿ.ವಿ.ಸಿಂಧು ತಮ್ಮ ಎದುರಾಳಿ ಜಪಾನಿನ ಒಕುಹರಾ ವಿರುದ್ಧ 21-19, 21-10 ಸೆಟ್‌ಗಳ ಅಂತರದಿಂದ ಮುನ್ನಡೆ ಸಾಧಿಸಿ ಜಯಗಳಿಸಿದರು.
 
ಸೆಮಿಫೈನಲ್ ಪಂದ್ಯದ ಗೆಲುವಿನೊಂದಿಗೆ ಪಿ.ವಿ.ಸಿಂಧು ಬೆಳ್ಳಿ ಪದಕ ಖಚಿತಪಡಿಸಿಕೊಂಡಿದ್ದಾರೆ. ಇದರೊಂದಿಗೆ ಒಲಿಂಪಿಕ್ ಬ್ಯಾಡ್ಮಿಂಟನ್‌ನಲ್ಲಿ ಫೈನಲ್ ಪ್ರವೇಶಿಸಿದ ಏಕೈಕ ಭಾರತೀಯ ಕ್ರೀಡಾಪಟು ಎನ್ನುವ ಹೆಗಗ್ಳಿಕೆಗೆ ಪಾತ್ರರಾಗಿದ್ದಾರೆ.
 
ಒಲಿಂಪಿಕ್ಸ್ ಫೈನಲ್ ಪಂದ್ಯದಲ್ಲಿ ಸಿಂಧು ಜಯಗಳಿಸಿದರೆ ಚಿನ್ನದ ಪದಕ ಪಡೆಯಲಿದ್ದಾರೆ. ಸೋತರೂ ಬೆಳ್ಳಿ ಪದಕ ಖಚಿತವಾದಂತಾಗಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ