ಪತಿ ಕಿರುಕುಳ ತಾಳಲಾರದೆ ರೇಡಿಯೋ ಜಾಕಿ ಆತ್ಮಹತ್ಯೆ

ಬುಧವಾರ, 26 ಏಪ್ರಿಲ್ 2017 (07:37 IST)
ಹೈದರಾಬಾದ್: ಪತಿಯ ವರದಕ್ಷಿಣೆ ಕಿರುಕುಳ ತಾಳಲಾರದೆ ಹೈದರಾಬಾದ್ ಮೂಲದ ರೇಡಿಯೋ ಜಾಕಿ ಸಂಧ್ಯಾ ಸಿಂಗ್ ಆತ್ಮಹತ್ಯೆ ಮಾಡಿಕೊಂಡದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

 
ಸೇನೆಯ ಮೇಜರ್ ಹುದ್ದೆಯಲ್ಲಿದ್ದ ಪತಿ ವೈಭವ್ ವಿಶಾಲ್ ಕಿರುಕುಳದಿಂದ ಬೇಸತ್ತು ಸಂಧ್ಯಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸಂಧ್ಯಾ ತವರು ಮನೆಯವರು ಮೇಜರ್ ವೈಭವ್ ವಿರುದ್ಧ ದೂರು ನೀಡಿದ್ದಾರೆ.

ವಿಚಿತ್ರವೆಂದರೆ ಸಂಧ್ಯಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದಾಗಿನಿಂದ ಮೇಜರ್ ವೈಭವ್ ಅನಾರೋಗ್ಯದ ನೆಪ ಹೇಳಿ ಆಸ್ಪತ್ರೆಗೆ ದಾಖಲಾಗಿದ್ದು, ಈಗಲೂ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಉತ್ತರ ಪ್ರದೇಶ ಮೂಲದವರಾದ ದಂಪತಿ ಎರಡು ವರ್ಷದ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದರು ಎನ್ನಲಾಗಿದೆ. ಇದೀಗ ಪತಿಯ ವಿರುದ್ಧ ತನಿಖೆಗೆ ಸೇನೆ ಪೊಲೀಸರಿಗೆ ಶೀಘ್ರದಲ್ಲೇ ಪ್ರಕರಣ ಹಸ್ತಾಂತರಿಸುವುದಾಗಿ ಭರವಸೆ ನೀಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ