ಕಾಶ್ಮೀರದತ್ತ ರಾಹುಲ್ ಗಾಂಧಿ; ಬರಬೇಡಿ ಅಂತಿದೆ ಸ್ಥಳೀಯಾಡಳಿತ
ಆದರೆ ಇದನ್ನು ಲೆಕ್ಕಿಸದೇ ರಾಹುಲ್ ಗಾಂಧಿ, ಗುಲಾಮ್ ನಬಿ ಆಜಾದ್ ಸೇರಿದಂತೆ ಸಿಪಿಐಂ, ಎನ್ ಸಿಪಿ, ಆರ್ ಜೆಡಿ, ಡಿಎಂಕೆ, ಟಿಎಂಸಿ ಸೇರಿದಂತೆ ವಿರೋಧ ಪಕ್ಷದ ಪ್ರಮುಖ ನಾಯಕರು ತಯಾರಿ ನಡೆಸಿದ್ದಾರೆ. ಆದರೆ ಅಹಿತಕರ ಘಟನೆ ನಡೆಯಬಹುದಾದ ಹಿನ್ನಲೆಯಲ್ಲಿ ಯಾವುದೇ ರಾಜಕೀಯ ನಾಯಕರಿಗೆ ರಾಜ್ಯ ಪ್ರವೇಶಿಸಲು ಸ್ಥಳೀಯಾಡಳಿತ ಅನುಮತಿ ನೀಡಿಲ್ಲ. ಹೀಗಾಗಿ ಇಂದು ಮತ್ತೊಂದು ಸಂಘರ್ಷ ನಡೆಯಬಹುದಾದ ಸಾಧ‍್ಯತೆಯಿದೆ.