ಕಾಂಗ್ರೆಸ್, ಮಹಾತ್ಮಾ ಗಾಂಧಿ ಎಲ್ಲರೂ ಎನ್ ಆರ್ ಐಗಳಂತೆ! ರಾಹುಲ್ ಗಾಂಧಿ ಬಣ್ಣನೆ!

ಶನಿವಾರ, 23 ಸೆಪ್ಟಂಬರ್ 2017 (07:05 IST)
ನ್ಯೂಯಾರ್ಕ್: ವಿದೇಶ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಚಳವಳಿ, ಮಹಾತ್ಮಾ ಗಾಂಧಿಯಂತಹ ಸ್ವಾತಂತ್ರ್ಯ ಹೋರಾಟಗಾರರು ಅನಿವಾಸಿ ಭಾರತೀಯರು ಎಂದಿದ್ದಾರೆ.


ಕಾಂಗ್ರೆಸ್ ಉಪಾಧ್ಯಕ್ಷರ ಈ ಹೇಳಿಕೆ ಮತ್ತಷ್ಟು ಚರ್ಚೆಗೆ ಕಾರಣವಾಗುವ ನಿರೀಕ್ಷೆಯಿದೆ. ಅಮೆರಿಕಾ ಪ್ರವಾಸದಲ್ಲಿರುವ ರಾಹುಲ್, ಸಭೆಯೊಂದರಲ್ಲಿ ಭಾಷಣ ಮಾಡುವಾಗನ ಅನಿವಾಸಿ ಭಾರತೀಯರನ್ನು ಹೊಗಳುವ ಭರದಲ್ಲಿ ಇಂತಹದ್ದೊಂದು ಹೇಳಿಕೆ ನೀಡಿದ್ದಾರೆ.

ಅನಿವಾಸಿ ಭಾರತೀಯರು ಭಾರತದ ಬೆನ್ನುಲು ಇದ್ದಂತೆ ಎಂದ ರಾಹುಲ್, ಮಹಾತ್ಮಾ ಗಾಂಧಿ,  ಜವಾಹರ್ ಲಾಲ್ ನೆಹರೂ, ಬಾಬಾ ಅಂಬೇಡ್ಕರ್, ಮೌಲಾನಾ ಆಝಾದ್ ರಂತಹ ಸ್ವಾತಂತ್ರ್ಯ ಹೋರಾಟಗಾರರು ಅನಿವಾಸಿ ಭಾರತೀಯರು ಎಂದು ಅಭಿಪ್ರಾಯಪಟ್ಟಿದ್ದಾರೆ.


ಭಾರತದ ಏಳಿಗೆಗೆ ಅನಿವಾಸಿ ಭಾರತೀಯರ ಕೊಡುಗೆಗಳನ್ನು ಹೊಗಳುತ್ತಾ ರಾಹುಲ್ ಗಾಂಧಿ ಹಲವು ಸ್ವಾತಂತ್ರ್ಯ ಹೋರಾಟಗಾರರು ವಿದೇಶದಲ್ಲಿ ನೆಲೆಸಿ ನಂತರ ಭಾರತಕ್ಕೆ ಬಂದು ತಮ್ಮ ಸಿದ್ಧಾಂತಗಳ ಮೂಲಕ ಸಮಾಜದಲ್ಲಿ ಏಳಿಗೆ ತಂದರು ಎಂದಿದ್ದಾರೆ.

ಇದನ್ನೂ ಓದಿ.. ಸಿಎಂ ಯೋಗಿ ಆದಿತ್ಯನಾಥ್ ರಾಜೀನಾಮೆ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ