ಮೆಚ್ಚಿನ ನಾಯಿ ಜತೆ ರಾಹುಲ್ ಗಾಂಧಿ ಜಾಲಿ ರೈಡ್: ವೈರಲ್ ಆಯ್ತು ಫೋಟೋ

ಗುರುವಾರ, 30 ಮೇ 2019 (10:18 IST)
ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋತ ಬಳಿಕ ರಾಜೀನಾಮೆ ಪ್ರಹಸನದ ಮೂಲಕ ಸುದ್ದಿಯಾಗಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇದೀಗ ರಾಜಕೀಯೇತರ ವಿಚಾರಕ್ಕಾಗಿ ಸುದ್ದಿಯಾಗಿದ್ದಾರೆ.


ದೆಹಲಿಯ ರಸ್ತೆಯಲ್ಲಿ ರಾಹುಲ್ ತಮ್ಮ ಮೆಚ್ಚಿನ ನಾಯಿ ‘ಪಿಡಿ’ಯನ್ನು ಕಾರಿನ ಹಿಂದಿನ ಸೀಟ್ ನಲ್ಲಿ ಕೂರಿಸಿಕೊಂಡು ಜಾಲಿ ರೈಡ್ ಮಾಡುವ ಫೋಟೋವನ್ನು ವ್ಯಕ್ತಿಯೊಬ್ಬರು ಸೆರೆಹಿಡಿದಿದ್ದು ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದ್ದಾರೆ.

ಈ ಫೋಟೋಗೆ ಹಲವಾರು ಮಂದಿ ಲೈಕ್ ಕೊಟ್ಟಿದ್ದಾರೆ. ಎಂದಿನ ಜುಬ್ಬಾ ಪೈಜಾಮ ಬಿಟ್ಟು ಟಿ ಶರ್ಟ್ ಧರಿಸಿ ರಾಹುಲ್ ಜಾಲಿ ರೈಡ್ ಮಾಡುವ ಫೋಟೋ ಈಗ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ