ಆರ್ ಎಸ್ಎಸ್ ಮಹಿಳೆಯರು ಚೆಡ್ಡಿ ಹಾಕಿಕೊಂಡಿರುವುದನ್ನು ನೋಡಿದ್ದೀರಾ? ರಾಹುಲ್ ಪ್ರಶ್ನೆ
ಗುಜರಾತ್ ಪ್ರವಾಸದಲ್ಲಿರುವ ರಾಹುಲ್ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವೊಂದರಲ್ಲಿ ಇಂತಹದ್ದೊಂದು ವಾದ ಮಂಡಿಸಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ರಾಹುಲ್, ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿದ್ದು, ಚೀನಾದವರಿಗೆ ಉದ್ಯೋಗ ಸಿಗುವಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.