ನಿಮ್ಮ ಕೈಲಾಗದಿದ್ರೆ ಒಪ್ಪಿಕೊಳ್ಳಿ ಎಂದು ಕೇಂದ್ರಕ್ಕೆ ಟಾಂಗ್ ಕೊಟ್ಟ ರಾಹುಲ್ ಗಾಂಧಿ

ಶನಿವಾರ, 11 ನವೆಂಬರ್ 2017 (09:58 IST)
ನವದೆಹಲಿ: ಗುಜರಾತ್ ಗೆ ಚುನಾವಣಾ ಪ್ರಚಾರಕ್ಕಾಗಿ ಮೂರು ದಿನಗಳ ಪ್ರವಾಸ ಕೈಗೊಳ್ಳಲಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟ್ವಿಟರ್ ನಲ್ಲಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

 
‘ಭಾರತೀಯರ ಮೇಲೆ ಗಬ್ಬರ್ ಸಿಂಗ್ ಟ್ಯಾಕ್ಸ್ ಹಾಕಲು ಬಿಜೆಪಿಗೆ ನಾವು ಅವಕಾಶ ಮಾಡಿಕೊಡಲ್ಲ. ಅವರಿಗೆ ಸಣ್ಣ ಮತ್ತು ಮಧ್ಯಮ ವರ್ಗದ ಉದ್ದಿಮೆಗಳ ಬೆನ್ನುಲುಬು ಮುರಿಯಲು ಸಾಧ್ಯವಿಲ್ಲ. ಕೋಟ್ಯಂತರ ಜನರ ಉದ್ಯೋಗಕ್ಕೆ ಕನ್ನ ಹಾಕಲು ಬಿಡಲ್ಲ’ ಎಂದು ರಾಹುಲ್ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

ಜಿಎಸ್ ಟಿ ತೆರಿಗೆಯನ್ನು ರಾಹುಲ್ ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ಲೇವಡಿ ಮಾಡುತ್ತಿರತ್ತಾರೆ. ಅದರ ಜತೆಗೆ ರಾಹುಲ್ ಟ್ವಿಟರ್ ನಲ್ಲೇ ಕೇಂದ್ರ ಸರ್ಕಾರಕ್ಕೆ ಮೂರು ಸಲಹೆ ನೀಡಿದ್ದಾರೆ. ಜಿಎಸ್ ಟಿ ತೆರಿಗೆಯನ್ನು ಸರಳೀಕರಣಗೊಳಿಸಿ, ಕಾಂಪ್ಲೆಕ್ಸ್ ಸೇವೆಗಳ ಮೂಲಕ ಭಾರತದ ಸಮಯ ಹಾಳು ಮಾಡಬೇಡಿ, ನಿಮ್ಮ ಕೈಲಾಗದಿದ್ದರೆ ಅಸಹಾಯಕತೆಯನ್ನು ಒಪ್ಪಿಕೊಳ್ಳಿ ಎಂದು ರಾಹುಲ್ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ