ಮುಂದಿನ ತಿಂಗಳೇ ರಾಹುಲ್ ಗಾಂಧಿಗೆ ಪಟ್ಟ?

ಶನಿವಾರ, 16 ಸೆಪ್ಟಂಬರ್ 2017 (08:33 IST)
ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷರಾಗಿರುವ ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೇರುವುದು ಯಾವಾಗ ಎಂಬ ಪ್ರಶ್ನೆ ಹಲವು ದಿನಗಳಿಂದ ಬರುತ್ತಲೇ ಇದೆ. ಪಕ್ಷದ ಮೂಲದ ಪ್ರಕಾರ ಆ ದಿನ ಮುಂದಿನ ತಿಂಗಳೇ ಬಂದರೂ ಅಚ್ಚರಿಯಿಲ್ಲ.

 
ಅಮೆರಿಕಾದಲ್ಲಿ ಸಂವಾದ ನಡೆಸಿದ್ದ ರಾಹುಲ್ ತಾನು ಪ್ರಧಾನಿಯಾಗಲು ರೆಡಿ ಎಂದಿದ್ದರು. ಅದಕ್ಕಿಂತ ಮೊದಲು ರಾಹುಲ್ ಗೆ ಕಾಂಗ್ರೆಸ್ ನ ಅಧ್ಯಕ್ಷ ಹುದ್ದೆ ಸಿಗಬೇಕಿದೆ. ಆದರೆ ಅದು ಇಷ್ಟು ದಿನ ಮುಂದೂಡುತ್ತಲೇ ಇತ್ತು.

ಆದರೆ ಮಾಜಿ ಸಚಿವ ವೀರಪ್ಪ ಮೊಯಿಲಿ ಈ ಬಗ್ಗೆ ತುಟಿ ಬಿಚ್ಚಿದ್ದು, ರಾಹುಲ್ ಆಂತರಿಕ ಚುನಾವಣೆ ಮೂಲಕ ಅಧ್ಯಕ್ಷರಾಗಲು ಬಯಸಬಹುದು. ಅದು ಮುಂದಿನ ತಿಂಗಳೇ ನಡೆದರೂ ಅಚ್ಚರಿಯಿಲ್ಲ ಎಂದಿದ್ದಾರೆ.

ಹಲವು ರಾಜ್ಯಗಳ ಚುನಾವಣೆ ದೃಷ್ಟಿಯಿಂದ ಮತ್ತು ಮುಂಬರುವ ಲೋಕಸಭೆ ಚುನಾವಣೆ ದೃಷ್ಟಿಯಿಂದ ರಾಹುಲ್ ತಕ್ಷಣವೇ ಅಧ್ಯಕ್ಷರಾಗಬೇಕು. ಅದು ಪಕ್ಷದ ಮತ್ತು ದೇಶದ ಹಿತದೃಷ್ಟಿಯಿಂದ ಒಳ್ಳೆಯದು ಎಂದು ಮೊಯಿಲಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ.. ‘ನನ್ನನ್ನು ಈ ಜಗತ್ತಿಗೆ ಪರಿಚಯಿಸಿದ್ದೇ ವಿರಾಟ್ ಕೊಹ್ಲಿ’
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ