ಶ್ರೀನಗರ(ಆ.09): ವಿಧಾನಸಭೆ ಚುನಾವಣೆ ಆರಂಭವಾಗುತ್ತಿದ್ದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜಕೀಯ ಚಟುವಟಿಕೆಗಳು ಮತ್ತೆ ಚುರುಕುಗೊಳ್ಳುತ್ತಿವೆ. ಸದ್ಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎರಡು ದಿನಗಳ ಕಣಿವೆ ನಾಡಿನ ಪ್ರವಾಸ ಕೈಗೊಳ್ಳಲಿದ್ದು, ಈ ನಿಟ್ಟಿನಲ್ಲಿ ಇಂದು, ಸೋಮವಾರ ಸಂಜೆ ಶ್ರೀನಗರ ತಲುಪಲಿದ್ದಾರೆ. 370 ನೇ ವಿಧಿಯನ್ನು ತೆಗೆದು ಹಾಕಿದ ಬಳಿಕ ಇದು ರಾಹುಲ್ ಗಾಂಧಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡುತ್ತಿರುವ ಮೊದಲ ಭೇಟಿಯಾಗಿದೆ. ಈ ವರ್ಷದ ಅಂತ್ಯದ ವೇಳೆಗೆ ಅಥವಾ 2022 ರ ಆರಂಭದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆ ಇದೆ. ಅಂದರೆ, ಮುಂದಿನ ವರ್ಷ ಮಾರ್ಚ್ ವೇಳೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಗಳನ್ನು ನಡೆಸಬಹುದು. ಇದಕ್ಕಾಗಿ ಡಿಲಿಮಿಟೇಶನ್ ಕೆಲಸವು ಅಂತಿಮ ಹಂತದಲ್ಲಿದೆ.
ರಾಹುಲ್ ಹೇಳಿಕೆಗೆ ಕಾಯುತ್ತಿದ್ದಾರೆ
ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಏನು ಹೇಳಬಹುದು, ಅವರ ಹೇಳಿಕೆ ಏನಿರಬಹುದೆಂಬುವುದರ ಮೇಲೆ ಎಲ್ಲರ ಗಮನವಿದೆ. ರಾಜ್ಯದ ಬಹುತೇಕ ರಾಜಕೀಯ ಪಕ್ಷಗಳು 370 ನೇ ವಿಧಿಯನ್ನು ಮರುಸ್ಥಾಪಿಸುವ ಬೇಡಿಕೆಯನ್ನು ಎತ್ತುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ಕಾಂಗ್ರೆಸ್ನ ನಿಲುವು ಹೇಗಿರುತ್ತದೆ ಎಂಬುವುದು ಬಹಳ ಮುಖ್ಯವಾಗುತ್ತದೆ. ಇದಕ್ಕೂ ಮುನ್ನ, 370 ರದ್ದಾದ ಎರಡು ವಾರಗಳ ನಂತರ, 2019 ರ ಆಗಸ್ಟ್ನಲ್ಲಿ ರಾಹುಲ್ ಗಾಂಧಿ ಪ್ರತಿಪಕ್ಷ ನಿಯೋಗದೊಂದಿಗೆ ಶ್ರೀನಗರವನ್ನು ತಲುಪಿದ್ದರು. ಆದರೆ ನಿರ್ಬಂಧ ಹೇರಿದ್ದರಿಂದ ವಿಮಾನ ನಿಲ್ದಾಣದಿಂದಲೇ ಮರಳಿದ್ದರು. ಇಂದು ಮದುವೆಗೆ ಹಾಜರಾಗಿ, ನಾಳೆ ದೇವಸ್ಥಾನಕ್ಕೆ ಭೇಟಿ
ರಾಹುಲ್ ಗಾಂಧಿ ಸೋಮವಾರ ಸಂಜೆ ತಡರಾತ್ರಿ ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಅಧ್ಯಕ್ಷ ಗುಲಾಂ ಅಹ್ಮದ್ ಮೀರ್ ಅವರ ಪುತ್ರ ಮತ್ತು ಸೊಸೆ ಆರತಕ್ಷತೆಯಲ್ಲಿ ಭಾಗವಹಿಸಲಿದ್ದಾರೆ. ಮಂಗಳವಾರ ಶ್ರೀನಗರದ ಕಾಂಗ್ರೆಸ್ ಕಚೇರಿಯನ್ನು ಉದ್ಘಾಟಿಸಲಿದ್ದಾರೆ. ಮುಂಜಾನೆ ಖೀರ್ ಭವಾನಿ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆಯಲಿದ್ದಾರೆ. ಈ ದೇವಸ್ಥಾನವು ಗಂದರ್ಬಾಲ್ನಲ್ಲಿದೆ.
5 ಆಗಸ್ಟ್ 2019 ರಂದು, ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಒಂದು ಮಹತ್ವದ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯಿದೆ 2019 ಪರಿಚಯಿಸಿತು. ಇದು ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನ ಕಲ್ಪಿಸುತ್ತಿದ್ದ ವಿಶೇಷ ಸ್ಥಾನಮಾನ, 370 ನೇ ವಿಧಿಯನ್ನು ತೆಗೆದುಹಾಕಿ, ರಾಜ್ಯವನ್ನು ಎರಡು ಕೃಏಂದ್ರ ಪ್ರದೇಶವನ್ನಾಗಿ ವಿಭಜಿಸುವ ಅವಕಾಶ ಕಲ್ಪಿಸಿತು. ಈ ಮೂಲಕ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಪ್ರಾಂತ್ಯಗಳು ರೂಪುಗೊಮಡವು. 370 ನೇ ವಿಧಿ ರದ್ದಾಗಿ ಎರಡು ವರ್ಷಗಳಾಗಿವೆ. ದೆಹಲಿ ಅತ್ಯಾಚಾರ ಪ್ರಕರಣದಲ್ಲಿ ಸಿಕ್ಕಾಕ್ಕೊಂಡ ರಾಹುಲ್
ಸಾಮಾಜಿಕ ಜಾಲತಾಣಗಳಲ್ಲಿ ರಾಹುಲ್ ಗಾಂಧಿ ಸಕ್ರಿಯರಾಗಿದ್ದಾರೆ. ಆದರೆ ಅವರು ತಮ್ಮ ಪೋಸ್ಟ್ಗಳಿಂದ ಅನೇಕ ಬಾರಿ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಾರೆ. ದೆಹಲಿಯಲ್ಲಿ ಅಮಾಯಕ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ, ಸಂತ್ರಸ್ತೆಯ ಕುಟುಂಬದವರ ಫೋಟೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಕ್ಕಾಗಿ ಆಕೆಯ ಖಾತೆಯನ್ನು ಅಮಾನತುಗೊಳಿಸಲಾಗಿತ್ತು.
ಅತ್ಯಾಚಾರ ಘಟನೆ ವರದಿಯಾದ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಲು ಹೋಗಿದ್ದರು. ರಾಹುಲ್ ಗಾಂಧಿಯ ಟ್ವಿಟರ್ ಹ್ಯಾಂಡಲ್ ನಿಂದ ಫೋಟೋವನ್ನು ಟ್ವೀಟ್ ಮಾಡಲಾಗಿದ್ದು, ಅದರಲ್ಲಿ ಅವರು ಸಂತ್ರಸ್ತೆಯ ಪೋಷಕರಿಗೆ ಸಂತಾಪ ಸೂಚಿಸುತ್ತಿರುವ ದೃಶ್ಯವಿತ್ತು. ಹುಡುಗಿಯ ಗುರುತು ಬಹಿರಂಗವಾದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ರಾಹುಲ್ ವಿರುದ್ಧ ಕ್ರಮಕ್ಕಾಗಿ ವ್ಯಕ್ತಿಯೊಬ್ಬರು ದೆಹಲಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯವು ಈ ವಾರ ವಿಚಾರಣೆ ನಡೆಸುವ ಸಾಧ್ಯತೆಯಿದೆ.