ರಾಜೀನಾಮೆಗೆ ಮುಂದಾದ ರೈಲ್ವೆ ಸಚಿವ ಸುರೇಶ್ ಪ್ರಭು.. ಪ್ರಧಾನಿಯಿಂದ ತಡೆ

ಬುಧವಾರ, 23 ಆಗಸ್ಟ್ 2017 (17:55 IST)
ಹಿಂದಿಂದೆ ಎರಡು ರೈಲು ಅಪಘಾತದ ಬಳಿಕ ನೈತಿಕ ಹೊಣೆ ಹೊತ್ತು ರೈಲ್ವೆ ಸಚಿವ ಸುರೇಶ್ ಪ್ರಭು ರಾಜೀನಾಮೆಗೆ ಮುಂದಾಗಿದ್ಧಾರೆ. ಆದರೆ, ಪ್ರಧಾನಮಂತ್ರಿ ನರೇಂದ್ರಮೋದಿ ರಾಜೀನಾಮೆಯನ್ನ ತಡೆದಿದ್ದಾರೆ.
 

ಈ ಬಗ್ಗೆ ಟ್ವೀಟ್ ಮಾಡಿರುವ ರೈಲ್ವೆ ಸಚಿವರು, ರೈಲು ಅಪಘಾತಗಳ ನೈತಿಕ ಹೊಣೆ ಹೊತ್ತು ರಾಜೀನಾಮೆಗೆ ಮುಂದಾಗಿದ್ದೆ. ಆದರೆ, ಪ್ರಧಾನಮಂತ್ರಿಗಳನ್ನ ಭೇಟಿಯಾದಾಗ ತಾಳ್ಮೆಯಿಂದಿರುವಂತೆ ಸೂಚಿಸಿದ್ದಾರೆ ಎಂದು ಸುರೇಶ್ ಪ್ರಭು ಹೇಳಿದ್ಧಾರೆ. ಉತ್ತರಪ್ರದೇಶದಲ್ಲಿ ವಾರದ ಅಂತರದಲ್ಲಿ ಎರಡು ರೈಲು ಅಪಘಾತ ಸಂಭವಿಸಿರುವುದು ನನಗೆ ತುಂಬಾ ನೋವಾಗಿದೆ.

 ಮಂಗಳವಾರ ಕಫಿಯತ್ ಎಕ್ಸ್`ಪ್ರೆಸ್ ರೈಲು ಅಪಘಾತದಲ್ಲಿ 70ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಶನಿವಾರ ಉತ್ಕಲ್ ಎಕ್ಸ್`ಪ್ರೆಸ್ ಅಪಘಾತದಲ್ಲಿ 21 ಮಂದಿ ಸಾವಿಗೀಡಾಗಿದ್ದಾರೆ ಎಂದು ಸುರೇಶ್ ಪ್ರಭು ದುಃಖ ತೋಡಿಕೊಂಡಿದ್ದಾರೆ.
3 ವರ್ಷಗಳ ಅಧಿಕಾರಾವಧಿಯಲ್ಲಿ ರೈಲ್ವೆಯ ಅಭಿವೃದ್ಧಿಗೆ ನನ್ನ ಕೈಲಾದಷ್ಟು ಶ್ರಮಿಸಿದ್ದೇನೆ ಎಂದು ಸುರೇಶ್ ಪ್ರಭು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ