ಇನ್ಮುಂದೆ ಎಸಿ ಬೋಗಿಗಳಲ್ಲಿ ಹೊದಿಕೆ ನೀಡದಿರಲು ರೈಲ್ವೆ ಇಲಾಖೆ ಚಿಂತನೆ

ಸೋಮವಾರ, 31 ಜುಲೈ 2017 (11:45 IST)
ನವದೆಹಲಿ: ರೈಲಿನ ಎ.ಸಿ.ಬೋಗಿಯಲ್ಲಿ ಪ್ರಯಾಣಿಸುವವರಿಗೆ ಕಹಿಸುದ್ದಿ. ಇನ್ಮುಂದೆ ಪ್ರಯಾಣಿಕರಿಗೆ ಹೊದಿಕೆಗಳನ್ನು ನೀಡದೆ ಇರಲು ಇಲಾಖೆ ಚಿಂತನೆ ನಡೆಸುತ್ತಿದೆ. ಇತ್ತೀಚೆಗೆ ಸಂಸತ್‌ನಲ್ಲಿ ಮಂಡಿಸಲಾಗಿರುವ ಸಿಎಜಿ ವರದಿಯಲ್ಲಿ ರೈಲು ಬೋಗಿಗಳಲ್ಲಿ, ನಿಲ್ದಾಣದಲ್ಲಿ ಕನಿಷ್ಠ ಪ್ರಮಾಣದ ಶುಚಿತ್ವ ಮತ್ತು ಪ್ರಯಾಣಿಕರಿಗೆ ನೀಡುವ ಆಹಾರದಲ್ಲಿ ಗುಣಮಟ್ಟ ಕಾಯ್ದು ಕೊಳ್ಳದ ಬಗ್ಗೆ ಆಕ್ಷೇಪವ್ಯಕ್ತಪಡಿಸಿತ್ತು. ಈ ನಿಟ್ಟಿನಲ್ಲಿ ಎ.ಸಿ. ಕೋಚ್‌ಗಳಲ್ಲಿ ಹೊದಿಕೆ ಗಳನ್ನು ನೀಡದೇ ಇರಲು ಇಲಾಖೆ ಚಿಂತನೆ ನಡೆಸುತ್ತಿದೆ. 
 
ಹೊದಿಕೆ ಬದಲಿಗೆ ತೊಳೆಯಲು ಸುಲಭವಾಗುವಂಥ ಹೊದಿಕೆಗಳನ್ನು ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಬೋಗಿಗಳಲ್ಲಿ ತಾಪಮಾನವನ್ನು 24 ಡಿಗ್ರಿ ಸೆಲ್ಸಿಯಸ್‌ಗೆ ಇರುವ ಪ್ರಾಯೋಗಿಕ ವ್ಯವಸ್ಥೆಯನ್ನು ಶೀಘ್ರವೇ ಜಾರಿ ಮಾಡಲಿದೆ. ಸದ್ಯ ಅದರ ಪ್ರಮಾಣ 19 ಡಿ.ಸೆ. ಇದೆ. ಹಾಲಿ ತಾಪ ಮಾನದಲ್ಲಿ ಚಳಿಯಾಗುವ ಕಾರಣ ಹೊದಿಕೆ ನೀಡಬೇಕಾಗುತ್ತದೆ. 
 
ಹೊದಿಕೆ ಮತ್ತು ಹಾಸಿಗೆಗೆ ಹೊದಿಸಲಾಗುವ ವಸ್ತ್ರಗಳನ್ನು ಶುಚಿಗೊಳಿಸಲು ಒಂದು ವಸ್ತ್ರಕ್ಕೆ 55 ರೂ. ವೆಚ್ಚ ವಾಗುತ್ತದೆ. ಆದರೆ ಪ್ರಯಾಣಿಕರಿಂದ ಕೇವಲ 22 ರೂ. ಪಡೆದುಕೊಳ್ಳಲಾಗುತ್ತಿದೆ. ನಿಯಮ ಪ್ರಕಾರ ಪ್ರತಿ ಹೊದಿಕೆ, ಹಾಸು ಗಳನ್ನು 2 ತಿಂಗಳಿಗೊಮ್ಮೆ ಸ್ವತ್ಛ ಮಾಡಬೇಕು. ಆದರೆ ಅದನ್ನು ಪಾಲಿಸಲಾಗುತ್ತಿಲ್ಲ. ಸತತ ದೂರುಗಳ ಹಿನ್ನೆಲೆಯಲ್ಲಿ ಇಲಾಖೆ ವಸ್ತ್ರಗಳನ್ನು ಒಗೆದು ಶುಚಿ ಮಾಡುವ ಆವರ್ತನವನ್ನು ತಗ್ಗಿಸಲು ಮುಂದಾಗಿದೆ. ಜತೆಗೆ ಹೊಸ ವಿನ್ಯಾಸದ, ಹಗುರ, ಸುಲಭ ವಾಗಿ ತೊಳೆಯಲು ಸಾಧ್ಯವಾಗುವ ಹೊದಿಕೆ ಒದಗಿಸುವ ಬಗ್ಗೆಯೂ ಚಿಂತನೆ ನಡೆಸಿದೆ. 
 

ವೆಬ್ದುನಿಯಾವನ್ನು ಓದಿ