ಜಮ್ಮು ಕಾಶ್ಮಿರಕ್ಕೆ ಭೇಟಿ ನೀಡಲಿರುವ ಗೃಹ ಸಚಿವ ರಾಜನಾಥ್ ಸಿಂಗ್

ಶುಕ್ರವಾರ, 22 ಜುಲೈ 2016 (16:50 IST)
ಕಳೆದ ಜುಲೈ 8 ರಂದು ಹಿಜ್ಬುಲ್ ಮುಜಾಹಿದಿನ್ ಉಗ್ರ ಬುರ್ಹಾನ್ ವನಿ ಎನ್‌ಕೌಂಟರ್‌ ನಂತರ ಜಮ್ಮು ಕಾಶ್ಮಿರದಲ್ಲಿ ಉಲ್ಬಣಗೊಂಡಿದ್ದ ಹಿಂಸಾಚಾರ ಇದೀಗ ತಹಬದಿಗೆ ಬರುತ್ತಿದ್ದು, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನಾಳೆ ಕಾಶ್ಮಿರಕ್ಕೆ ತೆರಳಿ ಪರಿಸ್ಥಿತಿಯ ಅವಲೋಕನ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಏತನ್ಮಧ್ಯೆ, ಕಾಶ್ಮಿರದಲ್ಲಿ ನಡೆದ ಹಿಂಸಾಚಾರದಲ್ಲಿ ಇಲ್ಲಿಯವರೆಗೆ 44 ಮಂದಿ ಯುವಕರು ಸಾವನ್ನಪ್ಪಿದ್ದು, ಎರಡು ಸಾವಿರಕ್ಕೂ ಹೆಚ್ಚಿನ ಜನರಿಗೆ ಗಂಭೀರವಾಗಿ ಗಾಯಗಳಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಶುಕ್ರವಾರದಂದು ಪ್ರಾರ್ಥನೆ ಸಲ್ಲಿಸಿ ನಂತರ ಕೆಲ ಕಿಡಿಗೇಡಿಗಳು ಹಿಂಸಾಚಾರಕ್ಕೆ ಇಳಿಯುವ ಆತಂಕದ ಹಿನ್ನೆಲೆಯಲ್ಲಿ 10 ಜಿಲ್ಲೆಗಳಲ್ಲಿ ಕರ್ಫ್ಯೂ ಮುಂದುವರಿಸಲಾಗಿದೆ. 
 
ಆದರೆ, ಬಾರಾಮುಲ್ಲಾ, ಬಂಡಿಪೋರಾ, ಬುದಗಾಮ್ ಮತ್ತು ಗಂದೇರ್‌ಬಲ್ ಜಿಲ್ಲೆಗಳಲ್ಲಿ ಕರ್ಫ್ಯೂ ಹಿಂದಕ್ಕೆ ಪಡೆಯಲಾಗಿದೆ.
 
ಮೊಬೈಲ್ ಟೆಲಿಫೋನಿ ಮತ್ತು ಮೊಬೈಲ್ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದ್ದು, 1 4ದಿನಗಳ ಬಂದ್‌ನಿಂದಾಗಿ ಸಾಮಾನ್ಯ ಜನಜೀವನ ಅಸ್ತವ್ಯಸ್ಥವಾಗಿದೆ.

 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ