ದಾವೂದ್‌ ಇಬ್ರಾಹಿಂನನ್ನು ಭಾರತಕ್ಕೆ ಮರಳಿ ತರಲಾಗುವುದು: ರಾಜನಾಥ್ ಸಿಂಗ್

ಮಂಗಳವಾರ, 24 ಮೇ 2016 (14:38 IST)
ದೇಶದ ಮುಸ್ಲಿಂ ಸಮುದಾಯ ಐಸಿಎಸ್ ಉಗ್ರ ಸಂಘಟನೆಯ ವಿರುದ್ಧವಾಗಿದ್ದರಿಂದ ಐಸಿಸ್‌ನಿಂದ ಯಾವುದೇ ಬೆದರಿಕೆಯಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
 
ದೇಶದ ಮುಸ್ಲಿಂ ,ಮುದಾಯ ಯಾವುದೇ ಕಾರಣಕ್ಕೂ ಐಸಿಎಸ್ ಉಗ್ರಗಾಮಿ ಸಂಘಟನೆಯನ್ನು ಬೆಳೆಯಲು ಬಿಡುವುದಿಲ್ಲ. ಆದ್ದರಿಂದ ಉಗ್ರಗಾಮಿ ಸಂಘಟನೆಯಿಂದ ಯಾವುದೇ ಆತಂಕವಿಲ್ಲ ಎಂದು ತಿಳಿಸಿದ್ದಾರೆ. 
 
ಭೂಗತ ದೊರೆ ದಾವೂದ್ ಇಬ್ರಾಹಿಂ ಕುರಿತಂತೆ ಮಾತನಾಡಿದ ಸಿಂಗ್, ದಾವೂದ್‌ನ್ನು ಭಾರತಕ್ಕೆ ಕರೆತಂದು ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. 
 
ದಾವೂದ್ ಅಂತಾರಾಷ್ಟ್ರೀಯ ಮಟ್ಟದ ಉಗ್ರಗಾಮಿಯಾಗಿದ್ದರಿಂದ ಅಂತಾರಾಷ್ಟ್ರೀಯ ಮಟ್ಟದ ತನಿಖಾ ಸಂಸ್ಥೆಗಳ ನೆರವು ಪಡೆಯುವುದು ಅಗತ್ಯವಾಗಿದೆ. ದಾವೂದ್‌ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಪಾಕಿಸ್ತಾನಕ್ಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
 
ಕಳೆದ ಎರಡು ವರ್ಷಗಳ ಅವಧಿಯಲ್ಲಿ ದೇಶದ ಅಂತರಿಕ ಭಧ್ರತೆಯನ್ನು ಬಲಪಡಿಸಲಾಗಿದ್ದು, ಭಯೋತ್ಪಾದನೆ, ನಕ್ಸಲ್ ಮತ್ತು ಮಾವೋವಾದಿಗಳ ದಾಳಿಗಳನ್ನು ಬಹುತೇಕವಾಗಿ ನಿಯಂತ್ರಿಸಲಾಗಿದೆ ಎಂದು ಹೇಳಿದ್ದಾರೆ.
 
ಪಠಾನ್‌ಕೋಟ್ ಉಗ್ರರ ದಾಳಿಯ ಬಗ್ಗೆ ಭದ್ರತಾ ಏಜೆನ್ಸಿಗಳು ವರದಿ ನೀಡಿವೆ. ಕಾಂಗ್ರೆಸ್ ಪಕ್ಷ ನಿಧಾನಗತಿಯಲ್ಲಿ ಜನತೆಯ ವಿಶ್ವಾಸವನ್ನು ಕಳೆದುಕೊಳ್ಳುತ್ತಿದೆ. ಮುಂಬರುವ ದಿನಗಳಲ್ಲಿ ರಾಜಕೀಯದಿಂದ ಕಣ್ಮರೆಯಾಗಲಿದೆ ಎಂದರು.   
 
ಕಾಂಗ್ರೆಸ್ ಪಕ್ಷಕ್ಕೆ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆಯೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ರಾಜನಾಥ್ ಸಿಂಗ್, ಇದು ಕಾಂಗ್ರೆಸ್ ಪಕ್ಷದ ಅಂತರಿಕ ವಿಷಯವಾಗಿದ್ದು, ಆದಾಗ್ಯೂ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದ್ದಾರೆ. 

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ