ಬಿಸ್ಲೆರಿಯನ್ನು ಮಾರಲು ಮುಂದಾದ ರಮೇಶ್ ಚೌಹಾಣ್

ಭಾನುವಾರ, 27 ನವೆಂಬರ್ 2022 (09:53 IST)
ನವದೆಹಲಿ : ಭಾರತದ ಅತಿ ದೊಡ್ಡ ಪ್ಯಾಕೇಜ್ಡ್ ನೀರಿನ ಕಂಪನಿ ಬಿಸ್ಲೆರಿಯನ್ನು ಟಾಟಾ ಗ್ರೂಪ್ ಸ್ವಾಧೀನಪಡಿಸಿಕೊಳ್ಳಲಿದೆ ಎಂದು ವರದಿಯಾಗಿದೆ.
 
ಭಾರತದಲ್ಲಿ ಪ್ರಿಸಿದ್ಧವಾಗಿರುವ ತಂಪು ಪಾನೀಯ ಥಮ್ಸ್ ಅಪ್, ಗೋಲ್ಡ್ ಸ್ಪಾ ಮತ್ತು ಲಿಮ್ಕಾ ಬ್ರ್ಯಾಂಡ್ಗಳ ಕಂಪನಿಯ ಅಧ್ಯಕ್ಷ ರಮೇಶ್ ಜೆ ಚೌಹಾಣ್ ಸುಮಾರು 30 ವರ್ಷಗಳ ಕಾಲ ಬಿಸ್ಲೆರಿ ಕಂಪನಿಯನ್ನು ಮುನ್ನಡೆಸಿ, ಇದೀಗ ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ ಲಿಮಿಟೆಡ್ಗೆ (ಟಿಸಿಪಿಎಲ್) ಸುಮಾರು 6,000-7,000 ಕೋಟಿ ರೂ.ಗೆ ಮಾರಾಟ ಮಾಡಲು ಮುಂದಾಗಿದ್ದಾರೆ.

82 ವರ್ಷದ ಚೌಹಾಣ್ ಅವರ ಮಗಳು ಜಯಂತಿ ತಮ್ಮ ತಂದೆಯ ಪಾನೀಯ ಕಂಪನಿಯ ವ್ಯಾಪಾರದಲ್ಲಿ ಆಸಕ್ತಿ ಹೊಂದಿರದ ಕಾರಣ ಚೌಹಾಣ್ ಇದೀಗ ಕಂಪನಿಗೆ ಉತ್ತರಾಧಿಕಾರಿ ಇಲ್ಲದಿರುವುದಕ್ಕೆ ಮಾರಾಟ ಮಾಡಲು ಮುಂದಾಗುತ್ತಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಚೌಹಾಣ್, ಬಿಸ್ಲೆರಿ ಕಂಪನಿಯ ಮಾರಾಟ ನೋವಿನ ವಿಚಾರವಾಗಿದೆ. ಇದನ್ನು ಟಾಟಾ ಗ್ರೂಪ್ ಇನ್ನೂ ಉತ್ತಮವಾಗಿ ಮುನ್ನಡೆಸುತ್ತದೆ ಎಂಬ ಭರವಸೆ ನನಗಿದೆ.

ಮೌಲ್ಯ ಹಾಗೂ ಸಮಗ್ರತೆಯ ವಿಚಾರಕ್ಕೆ ಟಾಟಾ ಸಂಸ್ಕೃತಿಯನ್ನು ನಾನು ಇಷ್ಟಪಡುತ್ತೇನೆ. ಬಿಸ್ಲೆರಿಯನ್ನು ಖರೀದಿಸಲು ಇತರರು ಆಸಕ್ತಿ ತೋರಿದರೂ ನಾನು ಇದನ್ನು ಟಾಟಾ ಕಂಪನಿಗೆ ನೀಡಲು ಮನಸ್ಸು ಮಾಡಿರುವುದಾಗಿ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ