ರಾಮನಗರ, ಜಮಖಂಡಿ ಉಪಚುನಾವಣೆಗೆ ದಿನಗಣನೆ ಆರಂಭಗೊಂಡಿರುವಂತೆ ಚುನಾವಣೆ ಅಖಾಡ ರಂಗೇರುತ್ತಿದೆ.
ಬಿಜೆಪಿ ಅಭ್ಯರ್ಥಿಯಾಗಿ ಅಖಾಡಕ್ಕೆ ಮಾಜಿ ಸಿಎಂ ಪುತ್ರಿ ಶಾಂಭವಿ ಕಣಕ್ಕೆ ಇಳಿಯಲಿದ್ದಾರೆ ಎಂಬ ಸುದ್ದಿ ಹರಿದಾಡಲಾರಂಭಿಸಿದೆ..?
ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಪುತ್ರಿಯನ್ನು ಕಣಕ್ಕಿಳಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ರೂಪಿಸುತ್ತಿದೆ ಎನ್ನಲಾಗಿದೆ. ಶಾಂಭವಿ ಎಸ್.ಎಂ.ಕೃಷ್ಣ ಅವರ ಸುಪುತ್ರಿಯಾಗಿದ್ದಾರೆ. ಈ ಮೂಲಕ ಜೆಡಿಎಸ್ ಅಭ್ಯರ್ಥಿ ಗೆ ಟಾಂಗ್ ಕೊಡಲು ಬಿಜೆಪಿ ಸಿದ್ದತೆ ನಡೆಸಿದೆ.
ಜೆಡಿಎಸ್ ನಿಂದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅಭ್ಯರ್ಥಿ ಯಾದ್ರೆ ಬಿಜೆಪಿ ಕೂಡ ಮಹಿಳಾ ಅಭ್ಯರ್ಥಿ ನಿಲ್ಲಿಸಲು ಪ್ಲಾನ್ ರೆಡಿಮಾಡಿಕೊಂಡಿದೆ. ಮಹಿಳೆಯರ ಮತ ಸೆಳೆಯಲು ಬಿಜೆಪಿ ಪ್ಲಾನ್ ರೂಪಿಸಿದ್ದು, ಇದಲ್ಲದೆ ಒಕ್ಕಲಿಗ ಜನಾಂಗದ ಪ್ರಭಾವಿ ಮುಖಂಡರಾಗಿರುವ ಎಸ್.ಎಂ.ಕೃಷ್ಣರ ಪುತ್ರಿ ಕಣಕ್ಕೆ ಇಳಿಯುವುದರಿಂದ ರಣಕಣ ಮತ್ತಷ್ಟು ರಂಗೇರಿ ಸ್ಪರ್ಧೆ ಬಿರುಸುಗೊಳ್ಳಲಿದೆ ಎನ್ನುವ ಲೆಕ್ಕಾಚಾರಗಳು ಹರಿದಾಡಲಾರಂಭಿಸಿವೆ.