14ನೇ ರಾಷ್ಟ್ರಪತಿಯಾಗಿ ರಾಮನಾಥ್ ಕೋವಿಂದ್ ಆಯ್ಕೆ’

ಗುರುವಾರ, 20 ಜುಲೈ 2017 (16:41 IST)
ನಿರೀಕ್ಷೆಯಂತೆ ಎನ್`ಡಿಎ ಅಭ್ಯರ್ಥಿ ರಾಮನಾಥ್ ಕೋವಿಂದ್ ದೇಶದ 14ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಶೇ.66ರಷ್ಟು ಮತಗಳನ್ನ ಪಡೆದ ರಾಮನಾಥ್ ಕೋವಿಂದ್ ಅಭೂತಪೂರ್ವ ಜಯ ಗಳಿಸಿದ್ದಾರೆ. ಮೀರಾಕುಮಾರ್`ಗೆ ಶೇ. 34ರಷ್ಟು ಮತಗಳು ಬಿದ್ದಿವೆ.

ಎನ್``ಡಿಎ ಅಭ್ಯರ್ಥಿ ರಾಮನಾಥ್ ಕೋವಿಂದ್ 702044 ಮತಗಳನ್ನ ಪಡೆದರೆ, ಯುಪಿಎ ಅಭ್ಯರ್ಥಿ ಮೀರಾ ಕುಮಾರ್ ನಿರೀಕ್ಷೆಯಂತೆ ಕೇವಲ 367314 ಮತಗಳನ್ನ ಪಡೆದಿದ್ಧಾರೆ. ದೇಶದ ಅತ್ಯುನ್ನತ ಹುದ್ದೇಗೇರಿದ 2ನೇ ದಲಿತ ನಾಯಕ ಎಂಬ ಖ್ಯಾತಿಗೆ ರಾಮನಾಥ್ ಕೋವಿಂದ್ ಪಾತ್ರರಾಗಿದ್ಧಾರೆ. ರಾಷ್ಟ್ರಪತಿ ಚುನಾವಣೆಯಲ್ಲಿ ಅಡ್ಡ ಮತದಾನ ಕೂಡ ನಡೆದಿದ್ದು, ಗುಜರಾತ್`ನ 8 ಕಾಂಗ್ರೆಸ್ ಶಾಸಕರು ಕೋವಿಂದ್`ಗೆ ಮತ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಜುಲೈ 25ಕ್ಕೆ ದೇಶದ 14ನೇ ರಾಷ್ಟ್ರಪತಿಯಾಗಿ ರಾಮನಾಥ್ ಕೋವಿಂದ್ ಸಂಸತ್ ಭವನದ ಸಭಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ